ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ, ಮುಡಿಪು ಇಲ್ಲಿ ಕನ್ನಡ ರಾಜ್ಯೋತ್ಸವ

ದಿನಾಂಕ ಒಂದು 1-11-2024 ಶುಕ್ರವಾರದಂದು ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ, ಮುಡಿಪು ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಕನ್ನಡ ಭಾಷಾ ಉಪನ್ಯಾಸಕಿಯಾದ ಪ್ರತಿಕ್ಷ ಇವರು ಸ್ವಾಗತಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ನಂತರ ಧ್ವಜಾರೋಹಣವನ್ನು ಅಧ್ಯಕ್ಷರಾದ ಡಾ.ಮಂಜುನಾಥ್. ಎಸ್ .ರೇವಣ್ಕರ್ ನಡೆಸಿದರು ನಾಡಗೀತೆಯನ್ನು ಅಪೂರ್ವ ಲಕ್ಷ್ಮಿ ಮತ್ತು ತಂಡದವರು ಹಾಡಿದರು


ನಂತರ ಕಾಲೇಜಿನ ವಿದ್ಯಾರ್ಥಿ ನಾಯಕನಾದ ಮೊಹಮ್ಮದ್ ಆಮಿನ್ ಶಿಬ್ಲಿ ಇವರು ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದರು ಅಪೂರ್ವ ಲಕ್ಷ್ಮಿ ಮತ್ತು ತಂಡದವರು ಹಚ್ಚೇವು ಕನ್ನಡದ ದೀಪ ಎಂಬ ಹಾಡನ್ನು ಹಾಡಿದರು. ಕಾಲೇಜಿನ ಅಧ್ಯಕ್ಷರು ಮತ್ತು ಪ್ರಾಂಶುಪಾಲರು ಕನ್ನಡ ರಾಜ್ಯೋತ್ಸವದ ಬಗ್ಗೆ ಒಂದೆರಡು ಹಿತನುಡಿಗಳನಾಡಿದರು. ನಂತರ ಉಪನ್ಯಾಸಕಿಯಾದ ಭವ್ಯ ಜ್ಯೋತಿ ಇವರು ತಾವು ಬರೆದ ಕನ್ನಡ ರಾಜ್ಯೋತ್ಸವದ ಹಾಡನ್ನು ಎಲ್ಲರ ಮುಂದೆ ಇಟ್ಟರು ಕಾಲೇಜಿನ ಉಪನ್ಯಾಸಕರು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಹಾಡನ್ನು ಹಾಡಿದರು. ಈ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ್ಕೆ ಆದರೆ ರಚನಾ ಇವರು ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.