ಕನ್ನಾಂಗಾರು : ಮನೆಗೆ ನುಗ್ಗಿ ನಗ ನಗದು ಕಳವು

ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.

ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು. ಸೋಮವಾರ ಸಂಜೆ ಸಮಯ ಆರ್ಡರ್ ಮಾಡಲಾದ “ಎಸಿ”ಯನ್ನು ಮನೆಗೆ ತಂದ ವ್ಯಕ್ತಿ ಮನೆಮಂದಿ ಬಾಗಿಲು ತೆರೆಯದೇ ಇದ್ದಾಗ ಅವರು ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಮನೆಗೆ ಬಂದ ಮನೆಯಜಮಾನಿ ಬಂದಾಗ ಹಿಂದಿನ ಬಾಗಿಲು ಮುರಿದು ಕಳ್ಳರು ಒಳಹೊಕ್ಕ ವಿಚಾರ ತಿಳಿದಿದೆ. ಮುಂದಿನ ಬಾಗಿಲು ತೆರೆಯಲು ಯತ್ನಿಸಿ ವಿಫಲವಾದಾಗ ಹಿಂದಿನ ಬಾಗಿಲ ಮೂಲಕ ಮನೆ ಪ್ರವೇಶಿಸಲಾಗಿದೆ. ಮನೆಯೆಲ್ಲಾ ಜಾಲಾಡಿಸಿ ಕಳ್ಳರು ಮಕ್ಕಳು ಊಪಯೋಗಿಸುತ್ತಿದ್ದ ಸುಮಾರು ಆರು ಪವಾನ್ ಚಿನ್ನದಾಭರಣ ಹಾಗೂ ಅರವತ್ತು ಸಾವಿರ ರೂಪಾಯಿ ನಗದು ಕಳವು ನಡೆಸಿದ್ದಾರೆ ಎಂಬುದಾಗಿ ಅವರ ಸಂಬಂದಿಕಯೊಬ್ಬರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಸಹಿತ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published.