Kantara 50 ದಿನ ಪೂರೈಸಿದ ‘ಕಾಂತಾರ’ : ಶೀಘ್ರದಲ್ಲಿ ಒಟಿಟಿಯಲ್ಲಿ ರಿಲೀಸ್
‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ 50 ದಿನ ಪೂರ್ಣಗೊಂಡಿದೆ. ‘ಕಾಂತಾರ’ ಚಿತ್ರದ ಒಟ್ಟಾರೆ ಮೇಕಿಂಗ್, ದಕ್ಷಿಣ ಕನ್ನಡ ಸೊಗಡು, ಕಂಬಳ ಮತ್ತು ಪ್ರಮುಖವಾಗಿ ಭೂತ ಕೋಲ ವಿಷಯ ಜನರಿಗೆ ಇಷ್ಟವಾಗಿದೆ. ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡರು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆದ ಬಳಿಕ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗತೊಡಗಿತು. ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಸಿನಿಮಾ ಧೂಳೆಬ್ಬಿಸಿದೆ.
‘ಕಾಂತಾರ’ ಚಿತ್ರ ನ. 24ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಈ ಕುರಿತಾಗಿ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ‘ಕಾಂತಾರ’ ಚಿತ್ರ ನ. 4ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ ಎಂದು ವರದಿ ಆಗಿತ್ತು. ಆ ಸಮಯದಲ್ಲಿ ಸಿನಿಮಾ ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಒಮ್ಮೆ ನೋಡಿದವರು ಮತ್ತೊಮ್ಮೆ, ಮತ್ತೊಮ್ಮೆ ನೋಡಿದರು ಇನ್ನೊಮ್ಮೆ ಎಂದು ಜನರು ಥಿಯೇಟರ್ಗಳಿಗೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಓಟಿಟಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಕೆಲ ಮೂಲಗಳ ಪ್ರಕಾರ ‘ಕಾಂತಾರ’ ಚಿತ್ರ ನ. 24ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ನಿರ್ಮಾಣ ಸಂಸ್ಥೆ ಅಥವಾ ಅಮೇಜಾನ್ ಪ್ರೈಮ್ ವಿಡಿಯೋದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಸಿನಿಮಾ 50 ದಿನ ಪೂರೈಸಿದ ಹೊರತಾಗಿಯೂ ಅನೇಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿತ್ರದ ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗುತ್ತಿದೆ. ಹೀಗಾಗಿ, ಈ ಹಿಂದಿನಂತೆ ಈಬಾರಿಯೂ ಒಟಿಟಿ ರಿಲೀಸ್ ದಿನಾಂಕ ಮತ್ತೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.