ಕಾಪು: ಯುನೈಟೆಡ್ ಟೋಯೊಟ ವತಿಯಿಂದ ಗ್ರ್ಯಾಂಡ್ ನವೆಂಬರ್ ಎಕ್ಸೇಂಜ್ ಮೇಳ ಫೈನಾನ್ಸ್ ಉತ್ಸವ

ಕಾಪು ನಲ್ಲಿ ಯುನಿಟೆಡ್ ಟೋಯೊಟ ವತಿಯಿಂದಗ್ರ್ಯಾಂಡ್ ನವೆಂಬರ್ ಎಕ್ಸೇಂಜ್ ಮೇಳ ಫೈನಾನ್ಸ್ ಉತ್ಸವ ಇಂದು ಸಂಭ್ರಮದಲ್ಲಿ ಶುಭ ಆರಂಭಗೊಂಡಿದೆ.

ಕಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಣಾಕ್ಷಿ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸರಿತಾ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಮಾರ್ಕೆಟಿಂಗ್ ಮೆನೇಜರ್ ಸೋನಿಯಾ ಮೇಡಂ ಅವರು ಮಾತನಾಡಿ, ಯುನಿಟೆಡ್ ಟೋಯೊಟ ವತಿಯಿಂದ ಉಡುಪಿ ಜಿಲ್ಲೆಯ ಕಾಪು ನಲ್ಲಿ ಗ್ರ್ಯಾಂಡ್ ನವೆಂಬರ್ ಮೇಳ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವ ನವೆಂಬರ್ 11 ರಿಂದ ನವೆಂಬರ್16 ರ ವರೆಗೆ ನಡೆಯಲಿದೆ
ಗ್ರ್ಯಾಂಡ್ ನವೆಂಬರ್ ಮೇಳದಲ್ಲಿ ಎಕ್ಸೇಂಜ್ ಮತ್ತು ಫೈನಾನ್ಸ್ ಉತ್ಸವದ ಅಂಗವಾಗಿ ಸ್ಪಾಟ್ ಬುಕ್ಕಿಂಗ್ ಆಫರ್,ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಕಾರನ್ನು ಖರೀದಿಸಬಹುದು.ಪ್ರತಿ ದಿನ ಬೆಳಿಗ್ಗೆ 10 ಯಿಂದ ಸಂಜೆ 6 ರ ವರೆಗೆ ಬುಕ್ಕಿಂಗ್ ಸೌಲಭ್ಯ ಇದೆ.
ಹಳೆ ವಾಹನ ಬದಲಾವಣೆಗೆ ಉತ್ತಮ ಬೆಲೆ ನೀಡಲಾಗುತ್ತದೆ.100% ಆನ್ ರೋಡ್ ಫಂಡಿಂಗ್,ಕಡಿಮೆ ನಗದು ಪಾವತಿ ಜೊತೆಗೆ 0 ಡೌನ್ ಪೇಮೆಂಟ್ ನಲ್ಲಿ ತಮ್ಮ ಕನಸಿನ ಕಾರ್ ಖರೀದಿಸಲು ಅವಕಾಶ ಇದೆ.ಹೈರೈಡರ್ ಕಾರ್ ಮತ್ತು ಫಾರ್ಚುನರ್ ಕಾರ್ ಮೇಲೆ ಒಂದು ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಆಫರ್ ಕೂಡ ಇದೆ. ನವೆಂಬರ್ ಶುಭ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕಾರ್ ನ್ನು ಮನೆಗೆ ಕೊಂಡು ಹೋಗಲು ಯುನಿಟೆಡ್ ಟೊಯೊಟಾ ಸುವರ್ಣಾವಕಾಶವನ್ನು ತಮ್ಮ ಗ್ರಾಹಕರಿಗೆ ಒದಗಿಸಿ ಕೊಟ್ಟಿದೆ ಎಂದರು.


ಗ್ರಾಹಕರಾದ ಉಮೇಶ್ ಶೆಟ್ಟಿ ಅವರು ಮಾತನಾಡಿ, ವಿಶ್ವದಲ್ಲಿ ಮತ್ತು ಭಾರತದಲ್ಲಿ ಸರಳ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿರುವ ಟೊಯೋಟಾ ಕಂಪನಿಯ ಹೊಸ ಮಾದರಿ ಕಾರ ಗಳನ್ನು ಕಾಪು ಜನರಿಗೆ ಪರಿಚಯಿಸುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ.ಅದರ ಜೊತೆಯಲ್ಲಿ ಫೈನಾನ್ಸ್ ಸೌಲಭ್ಯ ಕೂಡ ಮಾಡಿ ಕೊಡುವುದರ ಮುಖೇನ ಇಲ್ಲಿನ ಜನರಿಗೆ ಅನುಕೂಲತೆಗಳನ್ನು ಮಾಡಿ ಕೊಟ್ಟಿರುವುದು ಗ್ರಾಹಕರಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದರು.


ಮಾರ್ಕೆಟಿಂಗ್ ಆಫೀಸರ್ ಯಜ್ಞೇಶ್ ದೇವಾಡಿಗ ಮಾತನಾಡಿ, ಗ್ರಾಂಡ್ ನವೆಂಬರ್ ಮೇಳವು ಒಂದು ವಾರಗಳ ಕಾಲ ಕಾಪು ಜಂಕ್ಷನ್ ನಲ್ಲಿ ನಡೆಯಲಿದೆ. ಇದರ ಅಂಗವಾಗಿ ಹೊಸ ಕಾರ್ ಖರೀದಿಸುವವರಿಗೆ ಮತ್ತು ಹಳೆ ಕಾರ್ ಎಕ್ಸೆಂಜ್ ಮಾಡುವವರಿಗೆ ಆಕರ್ಷಕ ಕೊಡುಗೆಯನ್ನು ನೀಡಲಾಗುತ್ತಿದ್ದು.
ರುಮಿಯೋನ್ ಕಾರ್ ಗಳ ಮೇಲೆ 15ಸಾವಿರವರೆಗೆ ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್ ನೀಡಲಾಗಿದೆ.
ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಹಳೆ ಕಾರನ್ನು ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.


ಸೇಲ್ಸ್ ಆಫೀಸರ್ ಅಭಿಷೇಕ್ ಅವರು ಮಾತನಾಡಿ, ಭಾರತದಲ್ಲಿ ಮನೆ ಮಾತಾಗಿರುವ ಯುನಿಟೆಡ್ ಟೋಯೊಟ ಕಂಪನಿ ಕಾರ್ ಉದ್ಯಮದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕಾರ್ ಗಳನ್ನು ಮಾರಾಟ ಮಾಡಿ ಕೊಂಡು ಬಂದಿರುವ ಯುನಿಟೆಡ್ ಟೋಯೊಟ ಕಂಪನಿ ಗ್ರಾಹಕರ ನೆಚ್ಚಿನ ಕಂಪೆನಿ ಕೂಡ ಹೌದು ಎಂದರು.

ಈ ಸಂದರ್ಭದಲ್ಲಿ ವಿವಿಧ ಗಣ್ಯರು ಸಂಸ್ಥೆಯ ನೆಚ್ಚಿನ ಗ್ರಾಹಕರು , ಸಂಸ್ಥೆಯ ಸಿಬ್ಬಂದಿಗಳು ಉಪಸಿತರಿದ್ದರು.

add - tandoor .

Related Posts

Leave a Reply

Your email address will not be published.