ಕಾಪು: ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಸಂಪಿಗೆ ನಗರದಲ್ಲಿ ಮತಯಾಚನೆ
ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಭರ್ಜರಿ ಮಾತಾಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು,ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕ ಕ್ಷೇತ್ರ ಕ್ಕೆ ಹಲವಾರು ಅನುದಾನಗಳನ್ನು ನೀಡಿದೆ, ಇನ್ನಷ್ಟು ಯೋಜನೆಗಳನ್ನು ಬಿಜೆಪಿ ಸರ್ಕಾರವು ನಡೆಸಿ ಕೊಡಲಿದೆ ಕಾಪು ಕ್ಷೇತ್ರ ದ ಅಭಿವೃದ್ದಿಗೆ ಗುರ್ಮೆ ಸುರೇಶ್ ಶೆಟ್ಟಿ ಯವರ ಅಗತ್ಯ ವಿದೆ ನಿಮ್ಮ ಸಂಪೂರ್ಣ ಬೆಂಬಲ ಅವರಿಗೆ ನೀಡಬೇಕಾಗಿ ಕೇಳಿ ಕೊಂಡರು.
ನಂತರ ಮಾತನಾಡಿದ ಕಾಪು ವಿಧಾನ ಸಭಾ ಕ್ಷೇತ್ರ ದ ಶಾಸಕರು ಶ್ರೀ ಲಾಲಾಜಿ ಮೆಂಡನ್ ರವರು ಶೈಕ್ಷಣಿಕ, ಸಾಮಾಜಿಕ ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಯವರ ಜೊತೆಗೆ ಇದ್ದು ಬಿಜೆಪಿ ಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೆನೆ,ಗುರ್ಮೆ ಸುರೇಶ್ ಶೆಟ್ಟಿ ಯವರಿಂದ ಕಾಪು ಕ್ಷೇತ್ರವು ಅಭಿವೃದ್ಧಿ ಕ್ಷೇತ್ರವಾಗಲಿದೆ ಎಂದು ತಿಳಿಸಿ ನಿಮ್ಮ ಬೆಂಬಲ ನಮಗೆ ಅಗತ್ಯ ಎಂದು ತಿಳಿಸಿದರು.
ನಂತರ ಮಾತನಾಡಿದ ಉಡುಪಿ ವಿಧಾನ ಸಭಾ ಕ್ಷೇತ್ರ ದ ಬಿಜೆಪಿ ಶಾಸಕರು ರಘುಪತಿ ಭಟ್ ರವರು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ತಿಳಿಸಿದರು,ಗೋ ಹತ್ಯೆ ನಿಷೇದ ಕಾಯ್ದೆ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಮರು ಆಚರಣೆ ನಡೆಸುವ ಬಗ್ಗೆ ಹಾಗೂ, ಭಜರಂಗದಳ ನಿಷೇದ ಮಾಡುವದರ,ಈ ರೀತಿಯ ಹಗಲು ಕನಸುಗಳನ್ನು ಕಾಣುವುದು ಕಾಂಗ್ರೆಸ್ ಪಕ್ಷದವರು ಬಿಡಬೇಕು, ಧರ್ಮ ರಕ್ಷಣೆ ಗೋಸ್ಕರ ಇರುವ ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುತ್ತೆ ಎಂದು ಭರವಸೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ ಯವರು ಶಾಸಕ ಲಾಲಾಜಿ ಮೆಂಡನ್ ರವರ ಅಭಿವೃದ್ಧಿ ಕೆಲಸಗಳು ಆದರ್ಶವು ಕಾಪು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಶ್ರೀ ರಕ್ಷೆ ಯಾಗಲಿದೆ, ಬಿಜೆಪಿ ಪಕ್ಷದ ಸಿದ್ದಂತಾ, ರಾಷ್ಟ್ರೀಯವಾದ, ಹಾಗೂ ರಾಷ್ಟ್ರ ಪರ ಚಿಂತನೆಗಳು ಹಾಗೂ ಹಿರಿಯರೆಲ್ಲರು ನನ್ನ ಮೇಲೆ ಇಟ್ಟ ನಂಬಿಕೆ ಯನ್ನ ಉಳಿಸಿ ಕೊಂಡು ಹೋಗುತ್ತೇನೆ ಎಂಬ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ,ಉದ್ಯಾವರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ರವಿ ಕೋಟ್ಯಾನ್, RSS ಪ್ರಚಾರಕರು ಪ್ರಸಾದ್ ಕುತ್ಯಾರ್, ಉದ್ಯಾವರ ಪಂಚಾಯತ್ ಅಧ್ಯಕ್ಷರು ರಾಧಾಕೃಷ್ಣ ಶ್ರೀಯನ್,ರಾಜ್ಯ ಬಿಜೆಪಿ ಉಪಾಧ್ಯಕ್ಷರು ನಯನ ಗಣೇಶ್, ಸಂಪಿಗೆ ನಗರ ಭೂತ್ ಅಧ್ಯಕ್ಷರು ಶ್ರೀಧರ್ ಪಂಚಾಯತ್ ಸದಸ್ಯರು ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್,ಬಿಜೆಪಿ ಮುಖಂಡರು ಸುರೇಂದ್ರ ಪಣಿಯೂರು,ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ,ಸಂತೋಷ್ ಬೊಲ್ಜೆ,ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.