ತಿರುಪತಿಯ ಖ್ಯಾತಿಯ ವೆಂಕಟರಮಣ ದೇವಸ್ಥಾನ :ಲಕ್ಷದೀಪೋತ್ಸವ ಸಮಾಪನ

ಕಾರ್ಕಳ ತಿರುಪತಿ ಖ್ಯಾತಿಯ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದ ದೀಪುತ್ಸವ ನಡೆದು ಮಂಗಳವಾರ ಉತ್ಸವ ಭಕ್ತಿ ಭಾವಗಳಿಂದ ನಡೆದು ಲಕ್ಷ ದೀಪೋತ್ಸವ ಸಮಾಪನ ಗೊಂಡಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವೆಂಕಟರಮಣ ಮತ್ತು ಶ್ರೀನಿವಾಸ್ ದೇವರುಗಳನ್ನು ವಜ್ರತಟ್ಟೆಯಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಜಲಾವಗಹನಕ್ಕೆ ರಾಮಸಮುದ್ರಕ್ಕೆ ಕುಂಡಯ್ಯಲಾಯಿತು.

ಅವಭೃಧೂತೃವಕೆ ತೆರಳುವ ಮುನ್ನ ರಸ್ತೆ ಉದ್ದಕ್ಕೂ ಅಲ್ಲಲ್ಲಿ ಮನೆಗಳ ಮುಂದೆ ಸಿದ್ಧಗೊಳಿಸಿದ್ದ ಓ ಕುಳಿಯನ್ನು ಮಿಂದು ಮುಂದೆ ಸಾಗಲಾಯಿತು ಭಕ್ತರ ಸಮೂಹ ಬಣ್ಣದ ಓಕುಳಿಯಲ್ಲಿ ಮಿಂದಿದ್ದರು ದಾರಿ ಉದ್ದಕ್ಕೂ ಭಕ್ತರು ಹಣ್ಣು ಕಾಯಿ, ಆರತಿಗಳನ್ನು ಸಮರ್ಪಿಸಿದರು.
