ಕಾರಿಂಜ ಕ್ಷೇತ್ರವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ವಿಚಾರ, ಸಿಎಂ ಬೊಮ್ಮಾಯಿ ಜೊತೆ ಮಾತುಕತೆ

ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರ ದೇವಾಲಯವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದು, ಜಿಲ್ಲಾಧಿಕಾರಿ ವರದಿ ಬಳಿಕ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಸ್ತವಾರಿ ಸಚಿವ ಸುನಿಲ್ ಕುಮಾರ್ ಕಾರ್ಕಳ ತಿಳಿಸಿದರು. ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜೊತೆಗೆ ಕಾರಿಂಜೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದ ಬಳಿಕ ಪತ್ರ ಕರ್ತರ ಜೊತೆ ಮಾತನಾಡಿದರು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸಾನಿಧ್ಯಕ್ಕೆ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಭಕ್ತರು ಮತ್ತು ಸಂಘಟನೆಯರ ಈ ಬಗ್ಗೆ ಸ್ಥಳೀಯ ಶಾಸಕ ಹಾಗೂ ನನ್ನ ಗಮನ ಕ್ಕೆ ತಂದಿದ್ದರು. ಈ ಹಿನ್ನೆಲೆ ಯಲ್ಲಿ ಈಗಾಗಲೇ ಸಾಕಷ್ಟು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಧಾರ್ಮಿಕ ಸೂಕ್ಮ ಪ್ರದೇಶ ಘೋಷಣೆ ಯ ನಿರ್ಧಾರ ಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು. ಕಾರಿಂಜ ಕ್ಷೇತ್ರವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹಲವು ಬಾರಿ ಕಾರಿಂಜ ಕ್ಷೇತ್ರದಲ್ಲಾಗುವ ಗಣಿಗಾರಿಕೆಗೆ ಕಡಿವಾಣ ಸಹಿತ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ತನ್ನ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮುಖ್ಯ ಮಂತ್ರಿ ಜೊತೆ ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಿಂಜೇಶ್ವರ ದೇವಸ್ಥಾನ ದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರಮುಖರಾದ ವೆಂಕಟರಮಣ ಮುಚ್ಚಿನ್ನಾಯ, ಮಾದವ ಮಾವೆ, ಅಜಿತ್ ಶೆಟ್ಟಿ, ಜಯಲಕ್ಮೀ, ಸುದರ್ಶನ ಬಜ, ನರಸಿಂಹ ಮಾಣಿ, ರವಿ ಕೆಂಪುಗುಡ್ಡೆ, ಶರತ್ ಕುಮಾರ್, ರಮೇಶ್, ಗಣೇಶ್ ರೈ ಮಾಣಿ,ಪುರುಷೋತ್ತಮ ಶೆಟ್ಟಿ, ಪುಷ್ಪರಾಜ ಚೌಟ, ಹರೀಶ್ ಪ್ರಭು, ಶಿವಪ್ಪ ಗೌಡ, ರಾಮಕೃಷ್ಣ ಮಯ್ಯ, ಗಣೇಶ್ ಭಟ್, ಶುಭಕರ ಶೆಟ್ಟಿ, ಗಣಿ ಇಲಾಖೆಯ ಮಹಾದೇಶ್ವರ, ಗ್ರಾಮಕರಣಿಕೆ ಆಶಾ ಮೆಹಂದಲೆ, ಮೆಸ್ಕಾಂ ಇ.ಇ.ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.