ಕಾರ್ಕಳ : ಕಾಮಗಾರಿ ವೇಳೆ ಪುರಾತನ ಫಿರಂಗಿ ಮದ್ದು ಗುಂಡು ಪತ್ತೆ

ಕಾರ್ಕಳ ದ ಹೃದಯ ಭಾಗದಲ್ಲಿರುವ ಕೋಟೆಕಣಿಯೆಂಬಲ್ಲಿ ಖಾಸಗಿ ಸ್ಥಳದಲ್ಲಿ ಕಾಮಗಾರಿಕೆಗೆ ಎಂದು ನೆಲ ಅಗಿಯುತ್ತಿದ್ದ ವೇಳೆ ಪುರಾತನ ಕಾಲದಲ್ಲಿ ಫಿರಂಗಿಗಳಿಗೆ ಬಳಸುತ್ತಿದ್ದ ನೂರಾರು ಕಲ್ಲಿನ ಮದ್ದು ಗುಂಡುಗಳು ಪತ್ತೆಯಾಗಿವೆ.

ಈ ಸ್ಥಳದಲ್ಲಿ ಕೆಲವು ಸಮಯಗಳಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವೇಳೆ ಮದ್ದು ಗುಂಡುಗಳು ಶನಿವಾರ ಕಾಮಗಾರಿಗೆ ವೇಳೆ ಇವುಗಳು ಮದ್ದು ಗುಂಡುಗಳು ಕಂಡುಬಂದಿವೆ. ಪುರಾತನ ಕಾಲದಿಂದಲೂ ರಾಜರುಗಳ ಕೋಟೆಯಾಗಿತ್ತು ಮೈಸೂರಿನ ಟಿಪ್ಪು ಸುಲ್ತಾನ್ ಸಾಮ್ರಾಜ್ಯ ಕಾರ್ಕಳ ತನಕ ವಿಸ್ತರಿಸಿತು. ಆಂಗ್ಲರ ದಾಳಿಯಿಂದ ತನ್ನ ಸಾಮ್ರಾಜ್ಯ ರಕ್ಷಣೆಗಾಗಿ ಕಾರ್ಕಳ ನಗರದಲ್ಲಿ ಟಿಪ್ಪು ಅಗಳನ್ನು ನಿರ್ಮಿಸಿದ್ದನು. ಅದು ಕೋಟೆ ಕಣಿಯೆಂದೆ ಪ್ರಸಿದ್ಧಿ ಪಡೆದು ಪ್ರಚಲಿತ ದಲಿದೆ. ಈ ಸ್ಥಳವು ಈಗ ಖಾಸಗಿ ಪಾಲಾಗಿದ್ದು ಮದ್ದು ಗುಂಡುಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶನಿವಾರ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಸ್ಥಳದಲ್ಲಿ ಇನ್ನಷ್ಟು ಪುರಾತನ ವಸ್ತುಗಳ ಹುದಿಗಿರುವ ಸಾಧ್ಯತೆ ಬಗ್ಗೆ ಜನರಾಡಿಕೊಳ್ಳುತ್ತಿದ್ದು ದೊರೆತ ಫಿರಂಗಿ ಮದ್ದು ಗುಂಡುಗಳು ಪುರಾತತ್ವ ಇಲಾಖೆಗೆ ನೀಡಲು ಅಧಿಕಾರಿಗಳು ನಿರ್ದೇಶಿಸಿದ್ದಾರೆ ಸುಮಾರು 2 ಕೆಜಿ ತೂಕದಷ್ಟು ಭಾರ ಹೊಂದಿವೆ, ಒಟ್ಟು ಸುಮಾರು 3000 ದಷ್ಟು ಮದ್ದು ಗುಂಡುಗಳು ಸಿಕ್ಕಿವೆ.

Related Posts

Leave a Reply

Your email address will not be published.