ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ : ಸಾಣೂರಿನಲ್ಲಿ ವಾಹನಗಳ ತಪಾಸಣೆ

ಕಾರ್ಕಳ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಕಾರ್ಕಳ ತಾಲೂಕಿನ ಗಡಿಭಾಗದಲ್ಲಿ ಅಕ್ರಮವನ್ನು ತಡೆಗಟ್ಟಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಚುನಾವಣಾ ಆಯೋಗದಿಂದ ಬಂದ ಕಟ್ಟುನಿಟ್ಟಿನ ಆದೇಶದ ಬಂದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಗಡಿಭಾಗವಾದ ಸಾಣೂರಿನಲ್ಲಿ ನಗರ ಠಾಣ ಸಿಬ್ಬಂದಿಗಳಾದ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಕಟ್ಟುನಿಟ್ಟಿನ ತಪಾಸಣೆಯನ್ನು ಮಾಡುತ್ತಿದ್ದರು. ಕಾರ್ಕಳ ನಗರ ಠಾಣಾ ಸಹಾಯಕ ಪೆÇಲೀಸ್ ಉಪನಿರೀಕ್ಷಕರಾದ ರಾಜೇಶ್, ಮಹದೇವಪ್ಪ, ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ರಾಜಾರಾಮ ಸರ್ವೇಗಾರ್ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
