ಕಾರ್ಕಳ : ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಕಾರ್ಕಳ: ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ ನಸೀಬಾ ಬಾನು(33) ಎಂಬವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಮನೆಯ ಬಾವಿಗೆ ಬಿದ್ದಾಗ ಆಕೆಯ ಗಂಡ ಹುಸೇನ್ ಎಂಬವರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರು.ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಾವಿಗೆ ಬಿದ್ದ ನಸೀಬಾ ಬಾನು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್,ಸಿಬ್ಬಂದಿಗಳಾದ ಅಚ್ಯುತ ಕೆ, ಜಯ ಮೂಲ್ಯ,ಕೇಶವ, ಸುರೇಶ್ ಕುಮಾರ್, ಮಹಮ್ಮದ್ ರಫೀಕ್, ಸುಜಯ್, ವಿನಾಯಕ ಪಾಲ್ಗೊಂಡಿದ್ದರು.
