ವಿ4 ನ್ಯೂಸ್‍ನಲ್ಲಿ ನೀರಿನ ಘಟಕದ ದುರಸ್ತಿ ಕುರಿತು ವರದಿ ಬಿತ್ತರ : ಎಚ್ಚೆತ್ತ ಅಧಿಕಾರಿಗಳು

ಕಾರ್ಕಳದ ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಪ್ರಯಾಣಿಕರಿಗಾಗಿ ಶುದ್ಧ ಕುಡಿಯುವ ನೀರಿಗಾಗಿ ಸುಮಾರು ಒಂದು ಲಕ್ಷ ರೂಪಾಯಿಯ ವೆಚ್ಚದಲ್ಲಿ ನೀರಿನ ಘಟಕ ಅಳವಡಿಸಲಾಗಿತ್ತು. ಉದ್ಘಾಟನೆಗೊಂಡ ಒಂದೇ ತಿಂಗಳ ಅವಧಿಯಲ್ಲಿ ನೀರಿನ ಘಟಕ ಕೆಟ್ಟು ಹೋಗಿ ಅದನ್ನು ದುರಸ್ತಿ ಮಾಡುವ ಗೋಜಿಗೆ ಪುರಸಭೆಯಾಗಲಿ, ಸಂಬಂಧಪಟ್ಟ ಇಲಾಖೆ ತಲೆಕೆಡಿಸಿಕೊಂಡಿಲ್ಲ ಈ ಬಗ್ಗೆ ಸೆಪ್ಟಂಬರ್ 16ರಂದು ವಿ4 ನ್ಯೂಸ್‍ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿಗೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಅದನ್ನು ಕೂಡಲೆ ಸರಿಪಡಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಅಹಮದ್ ವಿ4 ಮಾಧ್ಯಮಕ್ಕೆ ಸಾರ್ವಜನಿಕರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ

Related Posts

Leave a Reply

Your email address will not be published.