ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ : ಕಾರ್ಕಳದ ವಿವಿಧೆಡೆ ಮತಪ್ರಚಾರ

ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಕಾವು ಏರತೊಡಗಿದೆ. ಒಂದು ಕಡೆಯಿಂದ ಬಿಸಿಲಿನ ತಾಪ. ಇನ್ನೊಂದು ಕಡೆಯಿಂದ ಚುನಾವಣಾ ಪ್ರಚಾರದ ಕಾವು ಈ ಮಧ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾದ ವಿ. ಸುನಿಲ್ ಕುಮಾರ್ ಅವರು ಮುಡಾರು ಗ್ರಾಮದ ಬಜೆಗೂಳಿಯಲ್ಲಿ ಪಾದಯಾತ್ರೆ ಮೂಲಕ ಮನೆಗಳಿಗೆ ಹಾಗೂ ಅಂಗಡಿ ಹೋಟೆಲ್ ಗಳಿಗೆ ಮತ್ತು ಗೇರು ಬೀಜದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಳಿ ತಮ್ಮ ಅವಧಿಯಲ್ಲಿ ಆದ ಯೋಜನೆಗಳನ್ನು ಮನದಟ್ಟು ಮಾಡಿ ಇನ್ನು ಮುಂದೆ ಕೈಗೊಂಡ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗಡೆ, ವೀಕ್ಯತ್ ಶೆಟ್ಟಿ, ಸುರೇಶ್ ಶೆಟ್ಟಿ ಹರೀಶ್ ಸಾಲಿಯಾನ್, ಹಿರಿಯ ಕಾರ್ಯಕರ್ತರಾದ ಲಕ್ಷ್ಮಣ್ ನಾಯಕ್ ,ರುಕ್ಮಯ , ಶ್ರೀಧರ ಪೂಜಾರಿ, ಸ್ಥಳೀಯರು ಪಂಚಾಯತ್ ಸದಸ್ಯರು ಮತಯಾಚನೆಯಲ್ಲಿ ಸುನಿಲ್ ಕುಮಾರ್ ಅವರಿಗೆ ಸಾತ್ ನೀಡಿದರು.
