ಕಾರ್ಕಳದ ಜೋಡು ರಸ್ತೆಯಲ್ಲಿ ಅಲಂಕಾರಿಕ ದೀಪ ಉದ್ಘಾಟನೆ
ಕಾರ್ಕಳದ ಅಭಿವೃದ್ಧಿಯಲ್ಲಿ ಮೂಲಸೌಕರ್ಯ ಜೊತೆಗೆ ಸಾರ್ವಜನಿಕರ ವೇಗಕ್ಕೆ ತಕ್ಕಂತೆ ಮಹತ್ತರವಾದ ದೂರವನ್ನು ಅಭಿವೃದ್ಧಿ ಕ್ಷೇತ್ರದಲ್ಲಿ ಕ್ರಮಿಸಿದ್ದೇನೆ. 10 ದಿಕ್ಕಿನಲ್ಲೂ ರಸ್ತೆಗಳು ಹೊಸತನಕ್ಕೆ ಮಗ್ಗು ಬದಲಿಸಿಕೊಂಡಿವೆ. ಇಡೀ ಕಾರ್ಕಳಕ್ಕೆ ಹೊಸ ರೂಪ ನೀಡಲಾಗಿದೆ ಎಂದು ಇಂದಿನ ಸಚಿವ ಸುನಿಲ್ ಕುಮಾರ್ ಹೇಳಿದರು.
ಕಾರ್ಕಳ ನಗರ ಭಾಗಕ್ಕೆ ಹತ್ತಿರದಲ್ಲಿರುವ ಜೋಡು ರಸ್ತೆಯಲ್ಲಿ 6.50 ಕೋಟಿ ವೆಚ್ಚದ ಸಮಗ್ರವಾಗಿ ಅಭಿವೃದ್ಧಿ ಕಾಮಗಾರಿ ಅಲಂಕಾರಿಕ ದೀಪ ಉದ್ಘಾಟಿಸಿ ಮಾತನಾಡಿದರು. ಜೋಡು ರಸ್ತೆ ಕಾರ್ಕಳದ ಹೆಬ್ಬಾಗಿಲು ಇದನ್ನು ಫುಟ್ ಪಾತ್ರ ಸಹಿತ ರಸ್ತೆಯಾಗಿಸಿದ್ದೇವೆ ಮುಂದೆ ಅವಕಾಶ ದೊರೆತರೆ ಅವಕಾಶವಿದ್ದ ಎಲ್ಲಾ ಕಡೆಗಳಲ್ಲಿ ಇದೇ ರೀತಿ ನವರೂಪ ನೀಡಲಾಗುವುದೆಂದು ಸಚಿವರು ಹೇಳಿದರು. ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮನಿರಾಜಶೆಟ್ಟಿ ಶೆಟ್ಟಿ ಶಾಸಕರ ಸಾಧನೆ ಬಗ್ಗೆ ಮಾತನಾಡಿದರು. ಜೋಡು ರಸ್ತೆ ನಾಗರಿಕರಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು. ಕುಕ್ಕುಂದೂರು ಗ್ರಾಮ ಪಂಚಾಯತಿನ ಅಧ್ಯಕ್ಷ ಶಶಿಮಣಿ ,ಬಿ ಆರ್ ಕೆ ಉದ್ಯಮಿ ನಾಗರಾಜ್ ಕಾಮತ್ ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್ ರಾಜ ಪುರ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಪ್ರಭು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಪಿಡಬ್ಲ್ಯೂಇ ಇಲಾಖೆ ಎ ಡಬ್ಲ್ಯೂ ಈ ಭುವನೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.