ಕಾರ್ಕಳ: ಮೇ 10ರಂದು ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ

ಕಾರ್ಕಳ :ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವವು ಮೇ ೧೦ ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವುದು ಎಂದು ಹಿರಿಯ ಸಹಕಾರಿ ದುರೀಣ, ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ದ.ಕ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ .ರಾಜೇಂದ್ರ ಕುಮಾರ್ ತಿಳಿಸಿದರು.
ಕಾರ್ಕಳದ ದಾನಶಾಲೆ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಕಾರ್ಕಳದಲ್ಲೆ ಪ್ರಾರಂಭಗೊಂಡ ಈ ಸ್ವಸಹಾಯ ಸಂಘ ದೇಶಕ್ಕೇ ಮಾದರಿ ಸಂಘವಾಗಿ ಗುರುತಿಸಲ್ಪಟ್ಟಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು,ಮಹಿಳೆ ಸಮಾಜದ ಕುಟಂಬ ಮಾತ್ರವಲ್ಲ ಸಮಾಜದ ಶಕ್ತಿಯಾಬೇಕು, ಮಹಿಳೆ ಸಾಮಾಜಿಕವಾಗಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವ್ರದ್ದಿ ಹೊಂದಿದರೆ ಮಾತ್ರ ಸಮಾಜ ಅಭಿವ್ರದ್ದಿಯಾಗುತ್ತದೆ ಎಂಬ ಸದುದ್ದೇಶದಿಂದ ಈ ಸಂಸ್ಥೆಯನ್ನುಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಮೇಘರಾಜ್ ರಾಜೇಂದ್ರ ಕುಮಾರ್, ಸುನೀಲ್ ಬಜಗೋಳಿ ಉಪಸ್ಥಿತರಿದ್ದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಪ್ರಧಾನ ವ್ಯವಸ್ಥಾಪಕಿ ಪೂರ್ಣಿಮಾ ಧನ್ಯವಾದವಿತ್ತರು.