ಕಾರ್ಕಳ ಪುರಸಭೆ ಸಾಮಾನ್ಯ ಸಭೆ, ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸಿ : ಶುಭದರಾವ್ ಸಭೆಯಲ್ಲಿ ಆಗ್ರಹ

ಪುರಸಭೆ ವ್ಯಾಪ್ತಿಯಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಕಳಪೆ ಕಾಮಗಾರಿಕೆಯಿಂದ ಕೂಡಿದೆ ಪರಿಸರದ ನಿವಾಸಿಗಳ ಬಾವಿಗಳು ಮಲಿನಗೊಂಡಿವೆ ಇದಕ್ಕಾಗಿ ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸುವಂತೆ ಶುಭದರಾವ್ ಆಗ್ರಹಿಸಿದರು . ಅಧ್ಯಕ್ಷ ಸುಮಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಮೂರು ಮಾರ್ಗದಿಂದ ರಥ ಬೀದಿ ಸೇರಿದಂತೆ ಒಳಚರಂಡಿ ಮೂಲಕ ಹಾದು ಹೋದ ಕಡೆಗಳಲ್ಲಿ ಮಲಿನ ನೀರು ಸೋರಿಕೆಯಾಗುತ್ತಿದೆ. ಒತ್ತಡ ತಪ್ಪಿಸಲು ಪ್ರತ್ಯೇಕ ಪೈಪುಗಳನ್ನು ಜೋಡಿಸಿಕೊಂಡಿದ್ದಾರೆ ಪೈಪ್ ಗಳಿಂದ ಕೊಳಚೆ ನೀರು, ಸೋರಿಕೆ ಆಗಿದ್ದು ಪರಿಸರದ ಬಾವಿ ಗಳ ಮಲಿನಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ.

ಸುಮಾರು 15 ಬಾವಿಗಳು ಮಲಿನಗೊಂಡು ಇದಕ್ಕೆಲ್ಲ ಒಳಚರಂಡಿ ಮಂಡಳಿಯ ಕಳಪೆ ಕಾಮಗಾರಿಕೆ ಕಾರಣ ಪುರಸಭೆಗೆ ಹಾಗೂ ಕಾರ್ಕಳ ಜನತೆಗೆ ಒಳಚರಣೆ ಮಂಡಳಿ ಮೋಸ ಮಾಡಿದೆ ಈ ಹಿಂದೆ ಪೆÇಲೀಸ್ರು ದೂರು ಕೊಟ್ಟರು ಏನು ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ವಿಪಕ್ಷ ನಾಯಕ ಅಷ್ಪಕ ಅಹಮದ್ ಧ್ವನಿಗೂಡಿಸಿ ಒಳಚರಂಡಿ ಕಾಮಗಾರಿಕೆ ಸಂಬಂಧಿಸಿದ 13 ಕೋಟಿ ರೂಪಾಯಿ ಕಾಮಗಾರಿಕೆಯ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಇರುವಂತೆ ಒತ್ತಾಯಿಸುತ್ತಾ ಬಂದಿದ್ದೇನೆ ಈವರೆಗೆ ಮಂಡಳಿ ಇದನ್ನು ಮಾಡಿಲ್ಲ ಎಂದು ಹೇಳಿದರು

ಒಳ ಚರಂಡಿಮಂಡಳಿ ಇಂಜಿನಿಯರ್ಗಳನ್ನು ಮೂರು ದಿನದೊಳಗೆ ಕರೆಯಿಸಿ ಉತ್ತರ ಕೊಡಿಸುವುದಾಗಿ ಅಧ್ಯಕ್ಷ ಸುಮಾ ಕೇಶವ್ ಹಾಗೂ ರೂಪಶೆಟ್ಟಿ ಹೇಳಿದರು ಪುರಸಭೆ ಅಧ್ಯಕ್ಷ ಸುಮ ಕೇಶವ್ ಪತ್ತೊಂಜಿ ಕಟ್ಟೆಯಲ್ಲಿ ಸ್ಲಂ ಬೋರ್ಡ್ ವತಿಯಿಂದ ಜಿ ಪ್ಲಸ್ ಮಾದರಿಯಲ್ಲಿ ನಿವೇಶನಕ್ಕೆ ವಾರ್ಡ್ ಸದಸ್ಯರು ತಮ್ಮ ವಾರ್ಡ್ ಗಳ ಫಲಾನುಭವಿಗಳ ಹೆಸರುಗಳನ್ನು ಆದಷ್ಟು ಬೇಗ ನೀಡುವಂತೆ ಹೇಳಿದರು. ಗೋಮಟ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಅಲ್ಲಿ ಪ್ರವಾಸಿಗರಿಗೆ ಸೂಕ್ತ ಶೌಚಾಲಯಗಳಿಲ್ಲ ಕೆಳಭಾಗದಲ್ಲಿದ್ದ ಶೌಚಾಲಯ ಬಂದಾಗಿದೆ ಇದನ್ನು ಪರಿಸರದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಗಳಿಲ್ಲ ಪ್ರವಾಸಿ ಬಂದವರಿಗೆ ಮೋಜು ಮಸ್ತಿಗೆ ಇದರಿಂದ ಅವಕಾಶವಾಗುತ್ತದೆ ರಾತ್ರಿ ಹೊತ್ತು ಹದಿಹರದ ಜೋಡಿಗಳು ಮಧ್ಯದ ಅಮಲಿನಲ್ಲಿ ತೇಲಾಡುತ್ತಿರುವುದು ಸ್ವಂತ ಕಂಡಿದ್ದೇನೆ.

ಪ್ರವಾಸಿ ತಾಣಗಳಲ್ಲಿ ಈ ರೀತಿ ಅವ್ಯವಸ್ಥೆ ಗಂಭೀರವಾಗಿ ಪರಿಗಣಿಸಿ ಅಗತ್ಯ ವ್ಯವಸ್ಥೆ, ಸುರಕ್ಷತೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸದಸ್ಯ ವಿನ್ನಿ ಬೋರ್ಡ್ ಸಭೆಯಲ್ಲಿ ಆಗಮಿಸಿದರು. ವಾರ್ಡ್ ಗಳಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಸದಸ್ಯೆ ಶಶಿಕಲ ಹೇಳಿದರು ರಾಮ ರಾಮ ಸಮುದ್ರದಿಂದ ಪೂರೈಕೆ ಮಾಡುತ್ತಿರುವನೀರು ಕೆಂಪು ಮಿಶ್ರಿತವಾಗಿದೆ ಎಂದು ನಳಿನಿ ಆಚಾರ್ಯ ಹೇಳಿದರು. ಸದಸ್ಯರ ಗೌರವ ಧನ ಹೆಚ್ಚಿಸಲು ಸದಸ್ಯರು ಪ್ರಸ್ತಾಪಿಸಿದರು. ಮುಖ್ಯ ಅಧಿಕಾರಿ ರೂಪ ಶೆಟ್ಟಿ ಉಪಾಧ್ಯಕ್ಷ ಪಲ್ಲವಿ ಸಭೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.