ಕಾರ್ಕಳ: ಪ್ರಿಯಕರನ ಜೊತೆ ಸೇರಿಕೊಂಡು ಪತಿಗೆ ವಿಷವುಣಿಸಿದ ಪತ್ನಿ

ಕಾರ್ಕಳ: ಕರಿಮಣಿ ಮಾಲೀಕ ನೀನಲ್ಲ ಅಂತಾ ಗಂಡನ ಜೊತೆ ರೀಲ್ಸ್ ಮಾಡಿದ ರೀಲ್ಸ್ ರಾಣಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಗೆ ವಿಷವುಣಿಸಿ ಕೊಂದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ  ದೆಪ್ಪುಜೆಯಲ್ಲಿ ನಡೆದಿದೆ.

ಪ್ರತಿಮಾ ಎಂಬಾಕೆಯೇ ತನ್ನ ಪತಿಗೆ ವಿಷವುಣಿಸಿ ಕೊಂದ ಅರೋಪಿಯಾಗಿದ್ದಾಳೆ.ಈಕೆಗೆ ಕೆಲವು ವರ್ಷಗಳ ಹಿಂದೆ ಬಾಲಕೃಷ್ಣ ಎನ್ನುವವರ ಜೊತೆಗೆ ಮದುವೆಯಾಗಿತ್ತು.ಈಕೆಗೆ ಈ ಹಿಂದಿನಿಂದಲೂ ಹಿರ್ಗಾನದ ದಿಲೀಪದ ಎನ್ನುವವನ ಜೊತೆಗೆ ಸಂಭಧವಿತ್ತು.

ರೀಲ್ಸ್ ಹುಚ್ಚು ಹಚ್ಚಿಕೊಂಡಿದ್ದ ಪ್ರತಿಮಾಳಿಗೆ ಗಂಡ ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರು ಎನ್ನಲಾಗಿದೆ.ಈ ಮದ್ಯೆ ದಿಲೀಪ್ ಹೆಗ್ಡೆ  ಜೊತೆಗಿರುವ ಸಂಭಂಧ ಬಗ್ಗೆ  ಗಂಡನಿಗೆ ಸಂಶಯ ಉಂಟಾಗಿತ್ತು.

ಹೀಗಾಗಿ ತಮ್ಮಿಬ್ಬರ ಸಂಭಂದಕ್ಕೆ ಅಡ್ಡಿಯಾಗುವ ಗಂಡನ್ನನ್ನು ಮುಗಿಸಲು ಇಬ್ಬರು ಸ್ಕೆಚ್ ಹಾಕಿದ್ದಾರೆ.ಪ್ರಿಯಕರ ದಿಲೀಪ್ ವಿಷ ಪದಾರ್ಥವನ್ನು ಪ್ರತಿಮಳ ಕೈಗೆ ಕೊಟ್ಟಿದ್ದು, ಅದನ್ನ ಆಹಾರದಲ್ಲಿ ಬೆರೆಸಿ ಕೊಟ್ಟಿದ್ದಾರೆ.

ಸ್ಲೋ ಪಾಯಿಸನ್ ನಿಂದಾಗಿ ಬಾಲಕೃಷ್ಣರಿಗೆ ವಾಂತಿ ಭೇದಿ ಶುರುವಾಗಿದೆ.ಪ್ಲಾನ್ ಪ್ರಕಾರ ಬಾಲಕೃಷ್ಣ ನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿದ್ದಾರೆ.ಅಲ್ಲಿಂದ ಕಾಮಾಲೆ ರೋಗ ಇದೆ ಎಂದು ಮಣಿಪಾಲ ಅಸ್ಪತ್ರೆ ,ಅಲ್ಲಿಂದ ವೆನ್ಲಾಕ್ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಕ್ಟೋಬರ್ 19 ರಂದು ಮನೆಗೆ ಕರೆದುಕೊಂಡು ಬಂದಿದ್ದಿ,ಬಳಿಕ ಅಕ್ಟೋಬರ್ 20 ರಂದು ಬೆಳಗ್ಗೆ ತನ್ನ ಪ್ರಿಯಕರ ಜೊತೆ ಸೇರಿಕೊಂಡು ಬೆಡ್ ಶೀಟ್ ನಿಂದ ಉಸಿರುಗಟ್ಟಿ ಸಾಯಿಸಿದ್ದಾರೆ.

ಬಳಿಕ ಬಾಲಕೃಷ್ಣ ಅಸೌಖ್ಯದಿಂದ ಸಾವನ್ನಾಪ್ಪಿದ್ದಾರೆ ಎಂದು ಹೇಳಿ ನಂಬಿಸಿದ್ದರು.ಅದ್ರೆ ಬಾಲಕೃಷ್ಣ ಕುಟುಂಬಸ್ಥರಿಗೆ ಈ ಬಗ್ಗೆ ಸಂಶಯ ಮೂಡಿದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.ಹೀಗಾಗಿ ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿದ್ದು ,ತಾವು ಸ್ಲೋ ಪಾಯಿಸನ್ ಕೊಟ್ಟು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಾರ್ಕಳ ಪೊಲೀಸರು ಪ್ರತಿಮ ಹಾಗೂ ಆಕೆಗೆ ಪ್ರಿಯಕರ ದಿಲೀಪ್  ವಿರುದ್ದ ಕೊಲೆ ಪ್ರಕರ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

add - Rai's spices

Related Posts

Leave a Reply

Your email address will not be published.