ಕಾರ್ಕಳ : ವಿದ್ಯಾನಿಧಿ, ಕಿಟ್ ವಿತರಣೆ ಕಾರ್ಯಕ್ರಮ

ಸನಾತನ ಹಿಂದೂ ಧರ್ಮದಲ್ಲಿ ಭಜನೆಗೆ ತುಂಬಾ ಮಹತ್ವವಿದೆ. ನಮ್ಮ ಪೂರ್ವಜರು ಅನಾಧಿಕಾಲದಿಂದಲೂ ಭಜನೆ ಹಾಗೂ ದೇವರ ನಾಮ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದಾರೆ. ಭಜನೆಯಿಂದ ವಿಭಜನೆ ಇಲ್ಲ. ಭಜನೆ ಎಲ್ಲರನ್ನೂ ಒಂದು ಮಾಡುವ ಆಧ್ಯಾತ್ಮಿಕ ಪ್ರಕ್ರಿಯೆ ಎಂದು ನಿವೃತ್ತ ಅಧ್ಯಾಪಕ ಸಾಯಿನಾಥ ಶೆಟ್ಟಿ ಹೇಳಿದರು.

ಅವರು ಪೊಸ್ರಾಲ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಮುಂಡ್ಕೂರು, ಸಚ್ಚೇರೀಪೇಟೆಯ ಸೇವಾ ಭಾರತಿಯ ವತಿಯಿಂದ ಭಜನಾ ತಂಡದ ಮಕ್ಕಳಿಗೆ ವಿದ್ಯಾನಿಧಿ ಹಾಗೂ ಕಿಟ್ ವಿತರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಚ್ಚರ ಪರಾರಿ ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಸೇವಾ ಭಾರತಿ ತಂಡ ಕಳೆದ ಒಂದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು ಈಗಾಗಲೇ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದು ತಂಡದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಪ್ರತಿಯೊಬ್ಬರ ಮನೆಗಳಲ್ಲಿ ಭಜನೆ ತಾಳ ಕೇಳಬೇಕೆಂದರು.

1.20 ಲಕ್ಷ ರೂಪಾಯಿ ವಿದ್ಯಾನಿಧಿ ವಿತರಿಸಲಾಯಿತಲ್ಲದೆ ಕಿಟ್ ವಿತರಣೆ ನಡೆಯಿತು.

ವೇದಿಕೆಯಲ್ಲಿ ಉದ್ಯಮಿ ಜಿನ್ನೋಜಿ ರಾವ್, ಸೋಮನಾಥ ಪೂಜಾರಿ, ಸತ್ಯನಾರಾಯಣ ಭಟ್, ಹರೀಶ್ ಹೆಗ್ಡೆ, ಭಜನಾ ತರಬೇತುದಾರ ಎರ್ಲ ಪಾಡಿ ಶ್ರೀನಿವಾಸ ಪೂಜಾರಿ, ರಾಜೇಂದ್ರ ದೇವಾಡಿಗ, ಸಚಿತ್ ನಂದಳಿಕೆ ,ಪ್ರಶಾಂತ್ ಶೆಟ್ಟಿ, ವೆಂಕಟೇಶ್ ಪೂಜಾರಿ, ಸುಕೇಶ್ ಶೆಟ್ಟಿ, ಸುನಿಲ್ ಶೆಟ್ಟಿ ರಾಜಾರಾಮ್ ಶೆಟ್ಟಿ ಮತ್ತಿತರದಿದ್ದರು.

Related Posts

Leave a Reply

Your email address will not be published.