ಕಾರ್ಕಳ : ಪತಿಯ ಸಾವಿನಿಂದ ನೊಂದ ಪತ್ನಿ ಆತ್ಮಹತ್ಯೆಗೆ ಶರಣು

ಕಾರ್ಕಳ : ಕಳೆದ ಒಂದು ತಿಂಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮಾಸಿಕವಾಗಿ ಕೊರಗುತ್ತಿದ್ದಂತ ಅಂಗನವಾಡಿ ಟೀಚರ್ ಮನೆ ಸಮೀಪದ ಬಾವಿಗೆ‌ಹಾರಿ ಆತ್ಮಹತ್ಯೆಗೈದ ಘಟನೆ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ.

ಸೌಮ್ಯ(39) ಎಂಬವರು ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವರು.

ಮಿಯ್ಯಾರು ಚಚ್ ೯ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಇವರ ಪತಿ ಕಳೆದೊಂದು ತಿಂಗಳ ಹಿಂದೆ ಮೃತಪಟ್ಟಿದ್ದರು.

ಈ ಬೆಳವಣಿಗೆಯಿಂದ ನೊಂದಿದ್ದ ಸೌಮ್ಯ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ.

ಮೃತದೇಹ ಕಾರ್ಕಳ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

add - LED Zone

Related Posts

Leave a Reply

Your email address will not be published.