ಕರ್ನಾಟಕ ಆಯುರ್ವೇದ ಮಹಾವಿದ್ಯಾಲಯದಲ್ಲಿ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮ

ಎಸ್‍ಸಿಎಸ್ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಅಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ವತಿಯಿಂದ ವೈದ್ಯರ ದಿನಾಚರಣೆ ಹಮ್ಮಿಕೊಂಡರು.

ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲರಾದ ಡಾ.ರವಿರಾವ್ ಎಸ್. ವೈದ್ಯರ ದಿನದ ಮಹತ್ವ ವಿವರಿಸಿದರು. ಎಸ್.ಸಿಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಿದ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಹೀದಾ ಬಾನು ಮತ್ತು ಕೌಮರಭ್ರತ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಲಕ್ಷ್ಮೀ ರೈ ಅವರನ್ನು ಅಭಿನಂದಿಸಲಾಯಿತು. ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಚರಣ್ ಅವರನ್ನು ವಾರಿಯರ್ 2021-2022 ಎಂದು ಗುರುತಿಸಿ ಗೌರವಿಸಲಾಯಿತು. ಉತ್ತಮ ಕಲಿಕಾ ವೈದ್ಯರಾಗಿ ಡಾ. ನೋಯಲ್ ಜೋಸ್ ಮಾರ್ಟೀನ್ ಹಾಗೂ ಡಾ. ರಿಶ್ಮಿನಾ ಬಶೀರ್ ಅವರನ್ನು ಅಭಿನಂದಿಸಲಾಯಿತು. ಆಡಳಿತಾಧಿಕಾರಿ ಯು.ಕೆ. ಖಾಲಿದ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಡಿ.ಕೆ. ವೈದ್ಯಕೀಯ ನಿರ್ದೇಶಕರಾದ ಡಾ. ಅಜಿತ್ ಕಾಮತ್, ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಜೆಸಿಂತಾ ಮಿನಾ ಡಿಸೋಜ, ಸಹಾಯಕ ಆಡಳಿತಾಧಿಕಾರಿ ಸಾಜು ಮೊದಲಾದವರು ಉಪಸ್ಥಿತರಿದ್ದರು. ಕಾಯಚಿಕಿತ್ಸಾ ಸ್ನಾತಕೋತ್ತದ ವಿಭಾಗದ ಪ್ರಾಧ್ಯಾಪಕ ಡಾ. ರವೀಂದ್ರ ಭಟ್, ವಂದಿಸಿದರು. ಡಾ. ಸಹನಾ ಬುಯ್ಯ ನಿರೂಪಿಸಿದರು.

Related Posts

Leave a Reply

Your email address will not be published.