ರಾಜ್ಯದ ಅಭಿವೃದ್ಧಿಗಳಿಗೆ ಕರ್ನಾಟಕ ಜನತಾ ಪಕ್ಷ ಬೆಂಬಲಿಸಿ : ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್
ರಾಜ್ಯದ ಜನತೆಯು ರಾಜ್ಯದ ಅಭಿವೃದ್ಧಿಗಳಿಗೆ ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸಿ ಸುವರ್ಣ ನಾಡನ್ನು ಕಟ್ಟಲು ಕೈ ಜೋಡಿಸಬೇಕೆಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಿದೆ. ರಾಜ್ಯದ ಜನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಜನತಾ ಪಕ್ಷ ಸಂಕಲ್ಪ ಮಾಡಿದೆ.
ನಾವು ನವೆಂಬರ್ 1ರಂದು ಬೀದರ್‍ನ ಬಸವಕಲ್ಯಾಣದಿಂದ ಪ್ರಚಾರವನ್ನು ಆರಂಭಿಸಿದ್ದೇವೆ. ಇದೀಗ ಕರಾವಳಿಗೆ ಆಗಮಿಸಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಈ ಬಾರಿ ಕೆಜೆಪಿಯಿಂದ 224 ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಈ ಬಾರಿ 50 ಸೀಟ್‍ಗಳನ್ನು ಗೆಲ್ಲಲು ಪಣ ತೊಟ್ಟಿದ್ದೇವೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕೆಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲಾ ರಾಜ್‍ಕುಮಾರ್, ದೊರೆ ರಾಜನ್, ವಿಳಂಬವ್, ಪುಟ್ಟಸ್ವಾಮಿ ಉಪಸ್ಥಿತರಿದ್ದರು.