ಕರ್ನಾಟಕ ರಾಜ್ಯ ರೈತಸಂಘ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ರೈತಘಟಕ ಜಿಲ್ಲಾ ಪೂರ್ಣ ಕಾರ್ಯಕಾರಿಣಿ

ದಿನಾಂಕ 28-08-2022 ರ ಅದಿತ್ಯವಾರ ಬೆಳಗ್ಗೆ 10-30ಗಂಟೆಗೆ ಪುತ್ತೂರಿನ ಸೈನಿಕಭವನದಲ್ಲಿ ಒಂದು ದಿನದ ಪೂರ್ಣ ಜಿಲ್ಲಾ ಕಾರ್ಯಕಾರಿಣಿಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಸಮಸ್ಯೆಗಳನ್ನು ಎದುರಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ಕಾರ್ಯಯೋಜನೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.


ಕಾರ್ಯಕಾರಿಣಿಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ದಿವಾಕರ ಪೈ ಮಜಿಗುಂಡಿ,ಅಲ್ವೀನ್ ಮೀನೇಜಸ್,ಬಾಲಕೃಷ್ಣ ಪರಮಲೆ,ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್ ಕನ್ಯಾನ,ಯುವ ರೈತ ಘಟಕದ ಜಿಲ್ಲಾಧ್ಯಕ್ಷರಾದ ಆದಿತ್ಯ ನಾರಾಯಣ ಕೊಲ್ಲಾಜೆ,ಪ್ರಧಾನ ಕಾರ್ಯದರ್ಶಿ ಶಿವಾನಂದ್ ಬಿಸಿರೋಡ್ ಗೌರವಾಧ್ಯಕ್ಷರಾದ ಸುರೇಂದ್ರ ಕೊರ್ಯ ,ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಾಜಾಕ್ಷ ಗೌಡ ಭೂತಕಲ್ಲು,ತಾಲೂಕು ಸಂಚಾಲಕರಾದ ಸೆಬಾಸ್ಟಿಯನ್ ಮಡಪ್ಪಾಡಿ,ಬಂಟ್ವಾಳ ತಾಲೂಕು ಗೌರವಾಧ್ಯಕ್ಷರಾದ ಮೋನಪ್ಪ ಗೌಡ ಪೆರ್ನೆ, ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್,ಲೊರೆಟ್ಟೋ ವಲಯ ಘಟಕದ ಪ್ರಧಾನ ಕಾರ್ಯದರ್ಶಿ ವಿವಿಯನ್ ಪಿಂಟೋ ಯುವ ಮುಖಂಡರುಗಳಾದ ಮಂಜುನಾಥ್ ಮಡ್ತಿಲ,ರಾಧಕೃಷ್ಣ ಏನೆಕಲ್ಲು,ರಮಾನಂದ ಮೂರ್ಜೆ,ಅಶ್ವಿನ್ ಎನ್ ಕೊಲ್ಲಾಜೆ ಹಾಗೂ ಇತರ ಯುವ ರೈತರು ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ ಸ್ವಾಗತಿಸಿ ಕಾರ್ಯಸೂಚಿಗಳನ್ನು ಮಂಡಿಸಿದರು


ಜಿಲ್ಲಾ ಕಾರ್ಯಕಾರಿಣಿಯಲ್ಲಿ ಚರ್ಚಿಸಿ ನಿರ್ಣಯಿಸಿದ ವಿಷಯಗಳು
1)ದಿನಾಂಕ 10-05-2022 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರೈತಮುಖಂಡರ ಸಭೆಯ ನಡಾವಳಿ ಅನುಷ್ಠಾನದ ಕುರಿತು ಚರ್ಚಿಸಿ ನಡಾವಳಿಯಲ್ಲಿ ಅನುಷ್ಠಾನ ವಾಗದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸರಕಾರಕ್ಕೆ ನೆನಪಿನ ಪತ್ರ ಬರೆದು ಸೆಪ್ಟೆಂಬರ್ ತಿಂಗಳ ಕೊನೆಯೊಳಗೆ ಪರಿಹಾರವಾಗದಿದ್ದಲ್ಲಿ ಆಕ್ಟೋಬರ್ ತಿಂಗಳ ಮೊದಲವಾರದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಣಯಿಸಲಾಯಿತು


2)ಅಡಿಕೆ ಎಲೆಹಳದಿ ರೋಗ ಸಂತ್ರಸ್ಥ ರೈತರ ಸ್ವಯಂ ಘೋಷಿತ ಅರ್ಜಿ ಸಂಗ್ರಹದ ಮಾಹಿತಿಯನ್ನು ಸಭೆಯು ಆಲಿಸಿ ಆಕ್ಟೋಬರ್ ೨ ಅಥವಾ ಮೂರನೇ ವಾರದಲ್ಲಿ ಅರಂತೋಡಿನಲ್ಲಿ ಸಂತ್ರಸ್ಥರ ಅಡಿಕೆ ಬೆಳೆಗಾರರು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಸಂತ್ರಸ್ಥ ಬೆಳೆಗಾರರ ಹಿತಾಸಕ್ತಿಗಾಗಿ ವರದಿ ಸಿದ್ಧಪಡಿಸುವ ಡಾ! ಪ್ರಕಾಶ್ ಕಮ್ಮರಡಿಯವರ ಸಂವಾದ ಕಾರ್ಯಕ್ರಮ ಆಯೋಜಿಸಲು ನಿರ್ಣಯಿಸಲಾಯಿತು


3)ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಸುಳ್ಯ ತಾಲೂಕಿನ ಕಲ್ಲುಗುಂಡಿ,ಸಂಪಾಜೆ,ಗೂನಡ್ಕಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ರವರೊಂದಿಗೆ ಜಿಲ್ಲಾ ಯುವ ರೈತ ಘಟಕ ಹಾಗೂ ಸುಳ್ಯ ತಾಲೂಕು ಘಟಕದ ಪದಾಧಿಕಾರಿಗಳು ಭೇಟಿ ನೀಡಿದ್ದರ ವರದಿ ಮಂಡಿಸಲಾಯಿತು ಹಾಗೂ ಹರಿಹರಪಲ್ಲತ್ತಡ್ಕ ಹಾಗೂ ಕಲ್ಮಕಾರು ಗ್ರಾಮಗಳಿಗೆ ರೈತಸಂಘ ಹಾಗೂ ಯುವ ರೈತ ಘಟಕದ ಪದಾಧಿಕಾರಿಗಳು ದಿನಾಂಕ 06-09-2022 ರಂದು ಭೇಟಿ ನೀಡಿ ಸಂತ್ರಸ್ಥರಿಗೆ ನಾಶ ನಷ್ಟ ಹೊಂದಿದ ಸಂಪೂರ್ಣ ಪರಿಹಾರ ಹಾಗೂ ನಾಶ ಹೊಂದಿದ ಮೂಲಭೂತ ಸೌಕರ್ಯಗಳ ಪುನರ್ನಿರ್ಮಾಣಕ್ಜೆ ಪ್ರಾಕೃತಿಕ ವೀಕೋಪ ಪರಿಹಾರ ಯೋಜನೆಯಲ್ಲಿ ಮರುಸ್ಥಾಪನೆಗೆ ಪೂರ್ಣಪ್ರಮಾಣದ ವರದಿಯನ್ನು ಸರಕಾರಕ್ಕೆ ನೀಡಿ ಒತ್ತಾಯಿಸಲು ನಿರ್ಣಯಿಸಲಾಯಿತು


4)ಈ ಬಾರಿಯ ಅನಿಯಮಿತ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ ಭಾಧಿಸಿರುವುದರಿಂದ 2013 ರಲ್ಲಿ ರಾಜ್ಯ ಸರಕಾರ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡಿದಂತೆ ಈ ಬಾರಿ ಕೂಡ ರಾಜ್ಯ ಸರಕಾರ ಹೆಕ್ಟೇರ್ ಗೆ ಕನಿಷ್ಠ ಒಂದು ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಹವಾಮಾನ ಆ್ಅರಿತ ಬೆಳೆ ವಿಮೆಯ ಪ್ರೀಮಿಯಮ್ ಪಾವತಿಸಿದ ರೈತರಿಗೆ 100% ದಷ್ಟು ಪರಿಹಾನಧನ ನೀಡಲೂ ಜಿಲ್ಲಾಡಳಿತ ರಾಜ್ಯ ಸರಕಾರ ವಿಮಾಕಂಪನಿಗಳಿಗೆ ನೀರ್ಧೇಶನ‌ನೀಡಲೂ ಒತ್ತಾಯಿಸಲೂ ನಿರ್ಣಯಿಸಲಾಯಿತು

5)ತೆಂಗಿನ ಕಾಯಿಯ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ಹಿಂದೆ ರಾಜ್ಯ ಸರಕಾರವೂ ಕೊಬ್ಬರಿಗೆ ಬೆಂಬಲ ಬೆಲೆ ನೀಡಿದಂತೆ ಪ್ರತೀ ಕಿಲೋ ತೆಂಗಿನ ಕಾಯಿಗೆ ಕನಿಷ್ಠ 50₹ ಯಂತೆ ಬೆಂಬಲಬೆಲೆ ನಿಗದಿ ಪಡಿಸಿ ನಾಫೆಡ್ / ಎ.ಪಿ.ಎಮ್.ಸಿ/ಸಹಕಾರಿ ಮಾರುಕಟ್ಟೆ ಸಂಸ್ಥೆಗಳ ಮೂಲಕ ಖರೀದಿಸಲು ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಲು ನಿರ್ಣಯಿಸಲಾಯಿತು


6)ಒಕ್ಕೂಟ ಸರಕಾರವೂ ವಿದ್ಯುತ್ ಖಾಸಗಿಕರಣದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವ ಕುರಿತುಕೃಷಿ ಮಸೂದೆಗಳ ವಿರುದ್ಧ ನಿರಂತರ ಒಂದು ವರ್ಷಗಳ ಕಾಲ ಚಳುವಳಿ ನಡೆಸಿ ಸರಕಾರವನ್ಬು ಮಣಿಸಿದ್ದರಿಂದ ರೈತ ಮಕ್ಕಳ ಮೇಲೆ ಹಗೆತನ ಸಾಧಿಸುವ ಹುನ್ನಾರವಾದ ಅಗ್ನಿ ಪಥ್ ಯೋಜನೆಯ ಕುರಿತು ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ಮೂರು ಮಸೂದೆಗಳಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ,ಎ.ಪಿ.ಎಮ್.ಸಿ. ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯಾ ನೀಷೇಧ ಹಾಗೂ ಸಂರಕ್ಷಣ ಕಾಯ್ದೆ ಹಿಂಪಡೆಯದಿರುವ ಕುರಿತು ವಿಸೃತವಾಗಿ ಚರ್ಚಿಸಿ ಹಾಗೂ ಈ ಮೇಲಿನ ಸಮಸ್ಯೆಗಳನ್ನು ಮುಂದಿಟ್ಟು ಆಕ್ಟೋಬರ್ 11 ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲು ನಿರ್ಣಯಿಸಲಾಯಿತು


7)ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಯುವ ರೈತ ಘಟಕವನ್ನು ಹಾಗೂ ರೈತ ಸಂಘವನ್ನು ವಿಸ್ತರಿಸುವ ಕುರಿತು ಚರ್ಚಿಸಿ ರೈತಸಂಘದ ಹಿರಿಯರ ಬೆಂಬಲದೊಂದಿಗೆ ಯುವ ರೈತಘಟಕದ ತಾಲೂಕು ಹಾಗೂ ಗ್ರಾಮಘಟಕಗಳನ್ನು ರಚಿಸಲು ನಿರ್ಣಯಿಸಲಾಯಿತು ಮೊದಲ ಹಂತವಾಗಿ ದಿನಾಂಕ 11-09-2022 ರಂದು ಬಂಟ್ವಾಳ ತಾಲೂಕು ರೈತಸಂಘದ ಪುನರ್ರಚನೆ ಹಾಗೂ ಯುವ ರೈತ ಘಟಕದ ತಾಲೂಕು ಘಟಕ ರಚನಾ ಸಭೆಯನ್ನು ಆಯೋಜಿಸಲು ನಿರ್ಣಯಿಸಲಾಯಿತು


8) ಉಭಯ ಘಟಕಗಳ ಸದಸ್ಯರಿಗೆ ಗುರುತಿನ ಚೀಟಿ ನೀಡುವ ಕುರಿತು ಚರ್ಚಿಸಿ ರೈತಸಂಘಕ್ಕೆ ನೂತನ ಸದಸ್ಯರಾಗುವವರು ವಾರ್ಷಿಕ ಸದಸ್ಯತನ ₹300/ ಸದಸ್ಯತನ ನವೀಕರಿಸುವವರು ₹ 200/ ಪಾವತಿಸಿದ 15 ದಿನಗಳ ಒಳಗಾಗಿ ಗುರುತಿನ ಚೀಟಿಯನ್ನು ನೀಡಲು ನಿರ್ಣಯಿಸಲಾಯಿತು


9)ಯುವ ರೈತ ಘಟಕಕ್ಕೆ ಸದಸ್ಯತ್ವ ಬಯಸುವವರು ವಾರ್ಷಿಕ ಸದಸ್ಯತನ ಶುಲ್ಕ ₹100/ ಹಾಗೂ ಗುರುತಿನ ಚೀಟಿಯ ಮೌಲ್ಯವನ್ನು ಪಾವತಿಸಿದ 15 ದಿನಗಳೊಳಗೆ ಗುರುತಿನ ಚೀಟಿ ನೀಡಲೂ ನಿರ್ಣಯಿಸಲಾಯಿತು


10) ಅಡಿಕೆ ಮಾರುಕಟ್ಟೆ ಧಾರಣೆಯ ಸ್ಥಿರತೆಯನ್ನು ಕಾಪಾಡಲು ಅಡಿಕೆ ಕನಿಷ್ಟ ಆಮದು ದರವನ್ನು ಏರಿಕೆ ಮಾಡುವುದರ ಕುರಿತು ಮತ್ತು ಸರ್ವೋಚ್ಚ ನ್ಯಾಯಲದಲ್ಲಿ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕಾರಕವೆಂಬ ತೂಗುಕತ್ತಿಯಿಂದ ಬೆಳೆಗಾರರನ್ನು ರಕ್ಷಿಸಲು ಕೇಂದ್ರ ಸರಕಾರವೂ ಪ್ರಮಾಣಪತ್ರ ಸಲ್ಲಿಸಲು ಒತ್ತಾಯಿಸಲು ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ನಿಯುಕ್ತಿಗೊಂಡ ಹಾಗೂ ARDF ನ ಗೌರವಾಧ್ಯಕ್ಷರಾದ ವೀರೇಂದ್ರ ಹೆಗ್ಗಡೆ ಯವರನ್ನು ಜಿಲ್ಲಾ ರೈತಸಂಘದ ನೀಯೋಗ ಭೇಟಿ ಮಾಡಿ ಒತ್ತಾಯಿಸಲು ನಿರ್ಣಯಿಸಲಾಯಿತು


11)ಕರಾವಳಿ ಭತ್ತದ ಪ್ಯಾಕೇಜ್ ಮರು ಜ್ಯಾರಿಗೆ ಒತ್ತಾಯಿಸುವ ಬಗ್ಗೆ ಸರಕಾರ ಈಗಾಗಲೇ ಪತ್ರ ಬರೆದಿದ್ದು ಸೆಪ್ಟೆಂಬರ್ ತಿಂಗಳೊಳಗೆ ಸರಕಾರ ಯೋಜನೆಯನ್ನು ಮರುಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲು ನಿರ್ಣಯಿಸಲಾಯಿತು


Related Posts

Leave a Reply

Your email address will not be published.