ಕಾರವಾರ: ದನಗಳನ್ನು ಬೇಟೆಯಾಡುತ್ತಿದ್ದ ಹುಲಿ ಬೋನಿಗೆ

ಕಾರವಾರ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದ್ರಾಳಿ ಮೊಳೆ ಊರುಗಳಲ್ಲಿ ಸಾಕು ದನಗಳ ಬೇಟೆ ಆಡುತ್ತಿದ್ದ ಹುಲಿಯನ್ನು ಗುಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಕಳೆದ 15 ದಿನಗಳಿಂದ ಹುಲಿಯೊಂದು ರೈತರ ದನದ ಕೊಟ್ಟಿಗೆಗೆ ಬಂದು ರಾತ್ರಿ ವೇಳೆ ದನಗಳನ್ನು ಕೊಂದು ಹೊತ್ತೊಯ್ಯುತ್ತಿತ್ತು. ಇಲ್ಲವೇ ತಿಂದು ಅರೆಜೀವ ಮಾಡಿ ಹೋಗುತ್ತಿತ್ತು. ಇದರಿಂದ ಬಡ ರೈತರು ಕಂಗಾಲಾಗಿ ಹೋಗಿದ್ದರ. ಅರಣ್ಯ ಇಲಾಖೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು.

ಚಂದ್ರಾಳಿಯ ದತ್ತಾ ಶಳಪೇಕರ್ ಇವರ 3 ದನಗಳು ರಾಮ ಬಿರಂಗಾತ ಇವರ 2ದನಗಳು ಈಗಾಗಲೇ ಹುಲಿಯ ದಾಳಿಗೆ ಬಲಿಯಾಗಿದ್ದವು. ಶನಿವಾರ ಮತ್ತೆ ರಾತ್ರಿ ವೇಳೆ 2 ದನಗಳ ಮೇಲೆ ಹುಲಿ ಆಕ್ರಮಣ ಮಾಡಿದ ಕಾರಣ ರೈತರ ನಿದ್ದೆ ಹಾರಿ ಹೋಗಿತ್ತು. ರವಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಉಳವಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂದಿದ್ದರು. ಆಗ ಉಳವಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಸಚಿವರಿಗೆ ಮನವಿ ನೀಡಿ ತಾಲೂಕಿನ ಜನರ ಸ್ಥಿತಿಯನ್ನ ವಿವರಿಸಿ ಹೇಳಿದ್ದರು. ಆಗ ಕಾಳಿ ಹುಲಿ ಯೋಜನಾ ನಿರ್ದೇಶಕ ಮಾರಿಯೋ ಕ್ರಿಸ್ತ ರಾಜ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಹುಲಿಯನ್ನು ಬಂದಿಸಿ, ಸಚಿವರ ಮಾತಿನಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನ ಮೂಲಕ ಹುಲಿ ಹಿಡಿದಿದ್ದಾರೆ

Related Posts

Leave a Reply

Your email address will not be published.