ಕಾಸರಗೋಡು: ಸಹಾಯದ ನಿರೀಕ್ಷೆಯಲ್ಲಿ ಪ್ರಶಾಂತ್ ರೈ ಕುಟುಂಬ

ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ ಖರ್ಚು ತಗುಲಿದೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದು, 70ರಿಂದ 75 ಲಕ್ಷ ಅಗತ್ಯವಿದೆ. ಈ ಚಿಕಿತ್ಸೆಯ ಮೊತ್ತವನ್ನು ಬರಿಸಲಾಗದೆ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ ಬಡ ಕುಟುಂಬ.
