ಕಾಸರಗೋಡು ಆರ್ಯ ಸಮುದಾಯ ಸಂಘದ ಪ್ರಥಮ ಮಹಾಸಭೆ

ಕಾಸರಗೋಡು ಆರ್ಯ ಸಮುದಾಯ ಸಂಘ ಇದರ ಪ್ರಥಮ ಮಹಾಸಭೆಯು ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಆರ್ಯ ಸಮಾಜ ಸಂಘ ಮಂಗಳೂರು – ಕಾಸರಗೋಡು ಇದರ ಅಧ್ಯಕ್ಷ ವಾಮನ ರಾವ್ ಮುಳ್ಳಂಗೋಡು ನೂತನ ಸಂಘಟನೆಯನ್ನು ಉದ್ಘಾಟಿಸಿದರು. ಆರ್ಯ ಸಮುದಾಯದ ಸಂಘದ ಅಧ್ಯಕ್ಷೆ ಪ್ರೇಮಲತಾ ವೈ ರಾವ್ ಅಧ್ಯಕ್ಷತೆ ವಹಿಸಿದ್ದರು. ಯತೀಶ್ ಕುಮಾರ್ ಪರಂಗೋಡು ಪ್ರಾಸ್ತಾವಿಕ ಭಾಷಣ ಮಾಡಿದರು. ಆರ್ಯ ಸಮುದಾಯ ಸಂಘದ ಕಾರ್ಯದರ್ಶಿ ಕೃಷ್ಣೋಜಿ ಮಾಸ್ಟರ್ ವರದಿ ವಾಚಿಸಿದರು.
ಕೋಶಾಧಿಕಾರಿ ಗಂಗಾಧರ ಕಾಂತಡ್ಕ ಲೆಕ್ಕಪತ್ರ ಮಂಡಿಸಿದರು. ಆರ್ಯ-ಮರಾಠ ಸಮಾಜ ಸಂಘದ ಕಾರ್ಯದರ್ಶಿ ಪ್ರದೀಪಚಂದ್ರ ಮೆಟ್ಟಿಗೆಕಲ್ಲು, ಕೋಶಾಧಿಕಾರಿ ಯು.ಮೋಹನ್ ರಾವ್ ,ಜೊತೆ ಕಾರ್ಯದರ್ಶಿ ಶಿಶುಪಾಲ್ ರಾವ್ ಮಂಗಳೂರು, ಜೊತೆ ಕಾರ್ಯದರ್ಶಿ ನಾರಾಯಣ ರಾವ್ ಕುಂಪಳ, ಯುವ ವೇದಿಕೆ ಸಂಚಾಲಕ ಧರ್ಮರಾಜ್.ಎಂ ಮಂಗಳೂರು, ಮಹಿಳಾ ಘಟಕದ ಸಂಚಾಲಕಿ ಪೂರ್ಣಿಮಾ ಹರೀಶ್ ಮಂಗಳೂರು, ಕಾಸರಗೋಡು ವಿಭಾಗದ ಉಪ ಸಂಚಾಲಕಿ ಅನನ್ಯ ಭರತ್ ಪರಂಗೋಡು, ಅಂಬಾ ಭವಾನಿ ಟ್ರಸ್ಟ್‍ನ ಬಿ.ಜೆ.ಚಂದ್ರಶೇಖರ್, ಆರ್ಯ ಸಮುದಾಯ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಿರಿಧರ್ ರಾವ್ ಚೊಟ್ಟೆ, ಕಾರ್ಯದರ್ಶಿ ಶ್ರೀಧರ ರಾವ್ ಬಾಯಿತ್ತೊಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮನೀಶ ಮಾಟೆಡ್ಕ ಅವರಿಗೆ ಆರ್ಯ ಮರಾಠ ಸಮಾಜ ಸಂಘ ಮಂಗಳೂರು ಕಾಸರಗೋಡು ಇವರಿಂದ ಸಹಾಯ ಧನ ವಿತರಿಸಲಾಯಿತು . ಆರ್ಯ ಸಮುದಾಯ ಸಂಘ ಕಾಸರಗೋಡು ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಗಿರಿಧರ ರಾವ್ ಚೊಟ್ಟೆ, ಉಪಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಪಿಲಿಕುಂಜೆ ಮತ್ತು ಕೃಷ್ಣೋಜಿ ಮಾಸ್ಟರ್, ಕಾರ್ಯದರ್ಶಿಯಾಗಿ ಶ್ರೀಧರ ರಾವ್ ಬಾಯಿತೊಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಗಾಯತ್ರಿ ಟೀಚರ್ ಮತ್ತು ರತ್ನಾಕರ ಅಂಬಿಕಾನಗರ, ಕೋಶಾಧಿಕಾರಿಯಾಗಿ ಪ್ರಕಾಶ್ ಎಂ ಕುಂಟಾರು ಮತ್ತು ಸದಸ್ಯರನ್ನು ಆರಿಸಲಾಯಿತು.
ಯಶಸ್ವಿ, ಭೂಮಿಕಾ, ಸೃಷ್ಟಿ, ವಂದನ ಮತ್ತು ಚಂದನ ಪ್ರಾರ್ಥನೆ ಹಾಡಿದರು. ಆರ್ಯ ಸಮುದಾಯ ಸಂಘದ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಪಿಲಿಕುಂಜೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಗಾಯತ್ರಿ ಟೀಚರ್ ವಂದಿಸಿದರು. ಪ್ರಕಾಶ್.ಎಂ ಕುಂಟಾರು ಕಾರ್ಯಕ್ರಮ ನಿರೂಪಿಸಿದರು.