ರಾಷ್ಟ್ರ ಮಟ್ಟದ ಸಮ್ಮೇಳನ : ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್- ಮ್ಯಾಸೊಕಾನ್ 2023

ಮೆಸೊಕಾನ್ 2023 – ಮಣಿಪಾಲ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ ಅನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗವು 2023 ರ ಮೇ 12 ಮತ್ತು 13 ರಂದು ಕೆಎಂಸಿ ಮಣಿಪಾಲದ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಿದೆ. ಈ ಸಮ್ಮೇಳನದಲ್ಲಿ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು, ಅವರು ಮುಖ್ಯವಾಗಿ ಭಾರತದಾದ್ಯಂತ ವಿವಿಧ ಆಂಕೊಲಾಜಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳಿಂದ ಬಂದವರು. ಸಮ್ಮೇಳನವನ್ನು ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿಜಯ್ ಕುಮಾರ್ ಎಂ. ಉದ್ಘಾಟಿಸಿದರು. ಡಾ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಉಪಕುಲಪತಿ, ಮಾಹೆ, ಮಣಿಪಾಲ ಮತ್ತು ಡಾ ಶೈಲೇಶ್ ವಿ ಶ್ರೀಕಂಡೆ , ಉಪನಿರ್ದೇಶಕರು ಟಾಟಾ ಮೆಮೋರಿಯಲ್ ಆಸ್ಪತ್ರೆ, ಮುಂಬೈ ಗೌರವ ಅತಿಥಿಗಳಾಗಿದ್ದರು. ಕೆಎಂಸಿ ಮಣಿಪಾಲದ ಡೀನ್ ಡಾ ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ವಂದಿಸಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ವಿಜಯ್ ಕುಮಾರ್ ಎಂ. ಅವರು ಐಸಿಎಂಆರ್ ಅಂಕಿ ಅಂಶಗಳ ಪ್ರಕಾರ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು 3 ಮತ್ತು 4 ನೇ ಹಂತಗಳಲ್ಲಿ ಆಸ್ಪತ್ರೆಗಳಿಗೆ ವರದಿಯಾಗುತ್ತಿವೆ ಮತ್ತು ಅಂತಹ ಪ್ರಕರಣಗಳನ್ನು ನಿರ್ವಹಿಸುವುದು ವೈದ್ಯರಿಗೆ ಸವಾಲಿನ ಕೆಲಸವಾಗಿದೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.100 ರಷ್ಟು ಗುಣಪಡಿಸಬಹುದಾಗಿದೆ. ಈ ರೀತಿಯ ಕಾರ್ಯಾಗಾರಗಳು ನಮ್ಮ ಜ್ಞಾನವನ್ನು ನವೀಕರಿಸಲು ಸಹಕಾರಿಯಾಗಿದೆ ಮತ್ತು ಪ್ರಮುಖವಾಗಿ ಯುವ ವೈದ್ಯರಿಗೆ ಇದು ಬಹಳ ಮುಖ್ಯ. ಸಮ್ಮೇಳನದಲ್ಲಿ ನೇರ ಶಸ್ತ್ರಚಿಕಿತ್ಸೆಗಳನ್ನು ಪ್ರದರ್ಶಿಸಿ ಮತ್ತು ಚರ್ಚಿಸಿತ್ತಿರುವುದಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಿದ ಇಡೀ ತಂಡಕ್ಕೆ ನನ್ನ ಅಭಿನಂದಿಗಳು ಎಂದರು.

ಡಾ. ಶೈಲೇಶ್ ವಿ ಶ್ರೀಕಂಡೆ ಅವರು ತಮ್ಮ ಭಾಷಣದಲ್ಲಿ, ವೈದ್ಯಕೀಯ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ತಂತ್ರಗಳನ್ನು ಕಲಿಯುವ ಮತ್ತು ನವೀಕರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಅದಕ್ಕಾಗಿ ನಾವು ಸಾಕಷ್ಟು ಸಮಯ ಮತ್ತು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆಕೇಂದ್ರದಲ್ಲಿ ನಾವು ಇನ್ನಷ್ಟು ಸೌಲಭ್ಯಗಳನ್ನು ನೀಡಲಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ಶಸ್ತ್ರಚಿಕಿತ್ಸಾ ತಂತ್ರಗಳು ಜ್ಞಾನದ ಒಂದು ಭಾಗವನ್ನು ಮಾತ್ರ ನೀಡುತ್ತವೆ ಆದರೆ ಲೈವ್ ಸರ್ಜರಿ ಕಾರ್ಯಗಾರ ಮತ್ತು ಪ್ರದರ್ಶನವು ಇದರ ಸಮಗ್ರ ಜ್ಞಾನವನ್ನು ನೀಡುತ್ತದೆ ಎಂದರು.

ಮುಂಬೈನ ಟಾಟಾ ಮೆಮೊರಿಯಲ್ ಆಸ್ಪತ್ರೆಯ ಡಾ. ಶೈಲೇಶ್ ವಿ ಶ್ರೀಕಂಡೆ , ಡಾ. ಅಶ್ವಿನ್ ಡಿಸೋಜ, ಡಾ. ಶಲಾಕಾ ಜೋಶಿ, ಡಾ. ಮನೀಶಾ ಭಂಡಾರೆ ಮತ್ತು ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ದೇವೇಂದ್ರ ಚೌಕರ್ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಸಮ್ಮೇಳನದಲ್ಲಿ ಲೈವ್ ಸರ್ಜರಿಗಳನ್ನು ಪ್ರದರ್ಶಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ನವೀನ ಕುಮಾರ್ ಸಮ್ಮೇಳನದ ಅವಲೋಕನವನ್ನು ನೀಡಿದರು. ಡಾ. ಪ್ರೀತಿ ಎಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.