ಕಾಲಮಿತಿ ಯಕ್ಷಗಾನಕ್ಕೆ ವಿರೋಧ:ಕಟೀಲಮ್ಮನೆಡೆ ಭಕ್ತರ ನಡೆ
ಮಂಗಳೂರು:ಕಟೀಲು ಮೇಳದ ಈ ಬಾರಿಯ ತಿರುಗಾಟ ಇದೇ ನವೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಅದರೆ ಈ ವರ್ಷದಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡಲು ಕಟೀಲು ದೇವಸ್ಥಾನ ಅಡಳಿತ ಮಂಡಳಿ ನಿರ್ಧರಿಸಿದ್ದು ಅದ್ರೆ ಕಾಲಮಿತಿ ಯಕ್ಷಗಾನಕ್ಕೆ ಭಕ್ತರ ಕಡೆಯಿಂದ ಅಸಮಾಧಾನ ಉಂಟಾಗಿದೆ.ಇಂದು ಬಜಪೆ ಪೇಟೆಯಿಂದ
ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆ ಜರಗಿತು.ಬಜಪೆಯ ಶಾರದಾ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಆರಂಭವಾಯಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಟೀಲಿಗೆ ಪಾದಯಾತ್ರೆ ಯಲ್ಲಿ ಭಜನೆ, ದೇವಿಯ ನಾಮ ಸ್ಮರಣೆ ಮಾಡುವ ಮೂಲಕ ಹೆಜ್ಜೆ ಹಾಕಿದ್ರು, ಬಳಿಕ ಕಟೀಲಿನಲ್ಲಿ ದೇವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ, ಕಾಲಮಿತಿ ನಿರ್ಧಾರದಿಂದ ಮೂಲ ಅಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿ ಹಾಗೂ ಪರಂಪರೆಗೆ ಚ್ಯುತಿ ಉಂಟಾಗಲಿದೆ ಹೀಗಾಗಿ
ಕಟೀಲು ಮೇಳದ ಯಕ್ಷಗಾನವು ಹಿಂದಿನಂತೆ ಬೆಳಗ್ಗಿನವರೆಗೆ ನಡೆಯಬೇಕು ಎಂದು ಭಕ್ತರ ಅಗ್ರಹ, ದ.ಕ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕಟೀಲಿನ ಅರು ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತದೆ..