ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ : ಲಲಿತಾ ಪಂಚಮಿ ಆಚರಣೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ನವರಾತ್ರಿ ಉತ್ಸವಕ್ಕೆ ಪ್ರಸಿದ್ಧಿ ಪಡೆದಿದೆ. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕಟೀಲು ದೇವಳಕ್ಕೆ ಲಕ್ಷಾಂತರ ಮಂದಿ ಭಕ್ತರು ಬೇಟಿ ನೀಡುತ್ತಿದ್ದಾರೆ. ಬೇರೆ ದೇವಸ್ಥಾನಗಳಲ್ಲಿನ ನವರಾತ್ರಿ ಉತ್ಸವಕ್ಕಿಂತ ಇಲ್ಲಿನ ಆಚರಣೆ ಭಿನ್ನವಾಗಿರುತ್ತದೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಹುಲಿ ವೇಷ ಮೆರವಣಿಗೆ ಬರುವುದು ಇಲ್ಲಿನ ವಿಶೇಷ. ನವರಾತ್ರಿಯ ಲಲಿತಾ ಪಂಚಮಿಯ ದಿನ ಕಟೀಲು ಗ್ರಾಮ, ಕೊಡೆತ್ತೂರು, ಮೂಲ ನಕ್ಷತ್ರದಂದು ಎಕ್ಕಾರು ಗ್ರಾಮದಿಂದ ದೇವಿ ಸನ್ನಿಧಿಗೆ ಹುಲಿವೇಷ ಮೆರವಣಿಗೆ ಬರುವುದು ಇಲ್ಲಿನ ಕ್ರಮ.

ಈ ಮೆರವಣಿಗೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಇದರ ಹಿಂದೆ ಧಾರ್ಮಿಕ ನಂಬಿಕೆ ಇದೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಲವಾರು ಮಂದಿ ಇಲ್ಲಿ ಹುಲಿವೇಷ ಹಾಕಿ ಕುಣಿಯುತ್ತಾರೆ. ಆಯಾ ಗ್ರಾಮದಲ್ಲಿ ನಿರ್ದಿಷ್ಟ ಜಾಗದಿಂದ ಹೊರಟ ಮೆರವಣಿಗೆಯು ದುರ್ಗೆಯ ಸನ್ನಿಧಿಯಲ್ಲಿ ಕುಣಿದು, ದೇವರ ಪ್ರಸಾದ ಸ್ವೀಕರಿಸಿ ತಮ್ಮ ಸೇವೆಯನ್ನು ತೀರಿಸುತ್ತಾರೆ.

ಲಲಿತಾ ಪಂಚಮಿ ದಿನ ದೇವಿಗೆ ವಿಶೇಷ ಪೂಜೆ ಆರಾಧನೆ ನಡೆದು ಸುಹಾಸಿನೀ ಪೂಜಾ ಪ್ರಕ್ರಿಯೆಗಳು ನಡೆದ ಬಳಿಕ ದೇವರಿಗೆ ಹರಕೆ ರೂಪದಲ್ಲಿ ಭಕ್ತರು ಸಮರ್ಪಿಸಿದ ಸೀರೆಗಳನ್ನು ಪ್ರಸಾದ ರೂಪವಾಗಿ ಲಲಿತಾ ಪಂಚಮಿ ದಿನ ಮಹಿಳೆಯರಿಗೆ ಭಕ್ತರು ಸಮರ್ಪಿಸಿದ ಸೀರೆಗಳನ್ನು ಪ್ರಸಾದ ರುಪದಲ್ಲಿ ವಿತರಿಸುವುದು ಕ್ರಮ ಹಾಗೆ ಕೆಲವು ವರ್ಷಗಳಲ್ಲಿ 15 ರಿಂದ30 ಸಾವಿರದಷ್ಟು ಮಹಿಳೆಯರು ದೇವರ ಶೇಷ ವಸ್ತ್ರ ಪಡೆದು ಕೃತಾರ್ಥರಾಗಿದ್ದಾರೆ.

Related Posts

Leave a Reply

Your email address will not be published.