ಕಾಪು-ಪಡುಬಿದ್ರಿ ಜಾತ್ರೆಗಳಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ಮನವಿ

ಕಾಪುವಿನಲ್ಲಿ ನಡೆಯುವ ಮಾರಿಪೂಜೆ ಹಾಗೂ ಪಡುಬಿದ್ರಿ ದೇವಳದಲ್ಲಿ ನಡೆಯುವ ರಥೋತ್ಸವ ಸಂದರ್ಭ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ದೇವಳಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿಯವರಿಗೆ ಬಜರಂಗದಳ ಕಾಪು ಪ್ರಖಂಡ ಸದಸ್ಯರು ಮನವಿ ಸಲ್ಲಿಸಿದ್ದಾರೆ. ದೇಶದ ಕಾನೂನನ್ನು ಹಾಗೂ ಹಿಂದೂ ಸನಾತನ ಧರ್ಮದ ಆಚಾರ-ವಿಚಾರಗಳನ್ನು ಗೌರವಿಸದ ಅನ್ಯಧರ್ಮಿಯರಿಗೆ ಜಾತ್ರಾ ಸಂಧರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಮನವಿಯನ್ನು ಸಲ್ಲಿಸಿದ್ದಾರೆ. ಮನವಿಯ ಬಗ್ಗೆ ಸ್ವಂಧಿಸಿದ ಅವಳಿ ದೇವಳಗಳ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಪಡುಬಿದ್ರಿ ದೇವಳದ ವಠಾರದಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡಿಲ್ಲ, ಕಾಪು ಹೊಸ ಮಾರಿಗುಡಿ ದೇವಳದ ವ್ಯಾಪಾರ ವಹಿವಾಟಿನ ಏಲಂ ಪ್ರಕ್ರಿಯೆ ಮುಗಿದ್ದು, ಅನ್ಯಧರ್ಮಿಯರಿಗೆ ನೀಡದಿರಲು ನಿರ್ಧರಿಸಿದ್ದರಿಂದ ಅವರೂ ಏಲಂನಲ್ಲಿ ಪಾಲ್ಗೊಂಡಿಲ್ಲ ಎಂದಿದ್ದಾರೆ. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಯೋಗೀಶ್ ಪಡುಬಿದ್ರಿ, ಸುಜೀತ್ ಶೆಟ್ಟಿ ಪಾದೆಬೆಟ್ಟು ಮುಂತಾದವರಿದ್ದರು.