ಕಾಪು ಕ್ಷೇತ್ರದ ಅಭಿವೃದ್ದಿ ಯೋಜನೆಯ ಪ್ರಣಾಳಿಕೆ ಬಿಡುಗಡೆ

“ನಮ್ಮಕನಸಿನ ಕಾಪು” ಎಂಬ ಶಿರ್ಷಿಕೆಯಡಿಯಲ್ಲಿ ಕಾಪು ಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಪೂರಕವಾದ ಪ್ರಣಾಳಿಕೆ ಎಂಬುದಾಗಿ ಸೊರಕೆ ಬಿಡುಗಡೆಗೊಳಿಸಿದರು.
ಕಾಪು ಕಾಂಗ್ರೆಸ್ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊರಕೆ, ಪ್ರಪ್ರಥಮವಾಗಿ ನಿವೇಶನ ರಹಿತರಿಗೆ ನಿವೇಶನ ನೀಡುವ ಕಾರ್ಯಕ್ರಮ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒಲವು, ಮಹಿಳಾ ಗುಂಪುಗಳಿಗೆ ನಾಲ್ಕು ಶೇಕಡಾ ಬಡ್ಡಿದರದಲ್ಲಿ ಸಾಲ, ಕುಡಿಯುವ ನೀರಿನ ಯೋಜನೆ, ಕಸ ವಿಲೇವಾರಿಗೆ ಒತ್ತು, ಸಮೂದಾಯ ಭವನಗಳ ನಿರ್ಮಾಣ, ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣ, ದಲಿತ ಕಾಲೊನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಸುಸಜ್ಜಿತವಾದ ಬಸ್ಸು ತಂಗುದಾಣಗಳ ನಿರ್ಮಾಣ, ತಾಲೂಕಿ ಬೇರೆ ಬೇರೆ 32 ಕಛೇರಿಗಳು ನಿರ್ವಾಹಣೆ ಮತ್ತು ಚಿಂತನೆ, ಕಾಪು ಕೇಂದ್ರದಲ್ಲಿ ಬಡ ಜನತೆಯ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟಿನ್ ಸ್ಥಾಪನೆ, ಕಾಪು ಪುರಸಭೆಯನ್ನು ರಾಜ್ಯಕ್ಕೆ ನಂ. ವನ್ ಆಗಿಸುವುದು. ಮುಂತಾದ ಅನೇಕ ಯೋಜನೆಗಳನ್ನು ಹೊತ್ತ ಪ್ರಣಾಳಿಕೆ ಬಿಡುಗಡೆಗೊಂಡಿದೆ. ಸುದ್ದಿಗೋಷ್ಢಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪ್ರಮುಖರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಮಾಧವ ಪಾಲನ್, ಹಮೀರ್, ದೇವರಾಜ್ ಕಾಪು ಇದ್ದರು.
