ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಮಾಹಿತಿ ಕಾರ್ಯಾಗಾರ

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುದರಂಗಡಿ ಪ. ಪೂ. ಕಾಲೇಜಿನಲ್ಲಿ ಪತ್ರಿಕಾ ಮಾಹಿತಿ ಕಾರ್ಯಗಾರ ನೆರವೇರಿತು.ಪತ್ರಿಕಾ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿ ಉಡುಪಿ ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಾಗ ಬೇಕಾದವರು ಪ್ರಮುಖವಾಗಿ ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸ ಬೇಕಾಗಿರುವುದು ಅತ್ಯಗತ್ಯವಾಗಿದೆ. ವೃತ್ತಿ ಬದುಕಿನಲ್ಲಿ ಪತ್ರಕರ್ತರಿಗಿರುವಷ್ಟು ಹೊಸತನ, ಸವಾಲುಗಳು ಯಾವ ಕ್ಷೇತ್ರದಲ್ಲೂ ಇಲ್ಲ ಅದನ್ನೇಲ್ಲವನ್ನೂ ಮೀರಿ ಪತ್ರಕೆಗಳಿಗೆ ಹೊಸ ಹೊಸ ಸುದ್ದಿಗಳನ್ನು ನೀಡುವ ಜವಾಬ್ದಾರಿ ಪತ್ರಕರ್ತರದ್ದಾಗಿದ್ದು, ಪ್ರವಾಹದ ವಿರುದ್ಧ ಈಜುವ ಎದೆಗಾರಿಕೆ ಪತ್ರಕರ್ತರಿಗಿರ ಬೇಕಾದ ಮುಖ್ಯ ಅಂಶ ಎಂದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ತಂತ್ರಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲಿಕ ಮರಾಠೆ, ಕೋಶಾಧಿಕಾರಿ ಹಮೀದ್ ಪಡುಬಿದ್ರಿ ಉಪಸ್ಥಿತರಿದ್ದರು. ಕಾಲೇಜು ಉಪನ್ಯಾಸಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
