ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ

ಕೊಣಾಜೆ : ವಿದ್ಯಾರ್ಥಿಗಳು ಜೀವನದಲ್ಲಿ ಇತಿಹಾಸ ನಿರ್ಮಿಸುವಂತಹ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಬಗರ್ ಹುಕುಂ ಸಮಿತಿ ಮಂಗಳೂರು ವಿಧಾನಾಭಾ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದರು.

ಉಳ್ಳಾಲ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಳ್ಳಾಲ ಇವರ ಸಂಯುಕ್ತ ಆಶ್ರಯದಲ್ಲಿ ಮುಡಿಪು ಗೋಪಾಲಕೃಷ್ಣ ಸಭಾಂಗಣದಲ್ಲಿ ಜರಗಿದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಇತಿಹಾಸವನ್ನು ಓದಿಕೊಳ್ಳುವ ಅಭ್ಯಾಸ ಇಟ್ಟುಕೊಳ್ಳಿ. 500 ವರ್ಷಗಳಾದರೂ ನೆನಪಿಸುವಂತಹ ವ್ಯಕ್ತಿತ್ವ ಕೆಂಪೇಗೌಡರದ್ದು, ಅವರದ್ದೇ ಆದರ್ಶಗಳ ಜೊತೆಗೆ ಬೆಳೆಯಿರಿ. ದುಶ್ಚಟ ಇಟ್ಟುಕೊಳ್ಳದೇ ಯೋಗ್ಯ ವ್ಯಕ್ತಿಯಾಗುವ ಯೋಚನೆಗಳಲ್ಲಿ ಶಿಸ್ತಿನ ಜೀವನದಲ್ಲಿ ಮುಂದುವರಿಯಿರಿ ಎಂದರು.ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಇತಿಹಾಸ ಉಪನ್ಯಾಸಕ ಗೋಪಾಲ್ ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉಳ್ಳಾಲ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಮಹನೀಯರ ಜೀವನಚರಿತ್ರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆದರ್ಶ ಜೀವನವನ್ನಾಗಿಸುವ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳಿ ಎಂದರು.

ಈ ಸಂದರ್ಭ ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಲೋಲಾಕ್ಷಿ ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು ಇಲ್ಲಿನ ಪ್ರಾಂಶುಪಾಲೆ ಪರಮೇಶ್ವರಿ ಹೆಚ್.ಆರ್, ಬಗರ್ ಹುಕುಂ ಸಮಿತಿ ಸದಸ್ಯರುಗಳಾದ ಪ್ರಸಾದ್ ಟಿ. ವೃಂದ, ಕಾರ್ಯಕ್ರಮ ಸಂಯೋಜಕರಾದ ಉಪತಹಶೀಲ್ದಾರ್ ನವನೀತ್ ಮಾಳವ, ಪ್ರಥಮ ದರ್ಜೆ ಸಹಾಯಕ ಕಿರಣ್ ಉಳ್ಳಾಲ, ಆಹಾರ ನಿರೀಕ್ಷಕ ರಫೀಕ್ ಉಪಸ್ಥಿತರಿದ್ದರು.ಉಪನ್ಯಾಸಕ ಅಂಬಾಪ್ರಸಾದ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.ಈ ಸಂದರ್ಭ ಉಳ್ಳಾಲ ತಾಲೂಕು ಮಟ್ಟದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ಮಕ್ಕಳನ್ನು ಅಭಿನಂದಿಸಲಾಯಿತು.

add - tandoor .

Related Posts

Leave a Reply

Your email address will not be published.