ಜೈನಕಾಶಿಗೆ ಆಗಮಿಸಿದ ಕೆಂಪೇಗೌಡ ರಥಯಾತ್ರೆ
ಮೂಡುಬಿದಿರೆ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲು ರಾಜ್ಯದೆಲ್ಲೆಡೆಯಲ್ಲಿ ಪವಿತ್ರ ಮಣ್ಣು ಮತ್ತು ಜಲ ಸಂಗ್ರಹಣೆ ವಿಶಿಷ್ಟ ಅಭಿಯಾನವನ್ನು “ಬನ್ನಿ ನಾಡ ಕಟ್ಟೋಣ” ಎಂಬ ಘೋಷ ವಾಕ್ಯದೊಂದಿಗೆ 15 ದಿನಗಳ ವರೆಗೆ ಹಮ್ಮಿಕೊಂಡ ರಥಯಾತ್ರೆಯು ಜೈನಕಾಶಿ ಮೂಡುಬಿದಿರೆಗೆ ಆಗಮಿಸಿತು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಮತ್ತು ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜೈನಮಠದ ಆವರಣದಲ್ಲಿ ಪೂರ್ಣಕುಂಭದ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಪುರಸಭಾ ಉಪಾಧ್ಯಕ್ಷೆ ಸುಜಾತ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಸೌಮ್ಯ ಶೆಟ್ಟಿ, ಶ್ವೇತಾ ಕುಮಾರಿ, ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರೆ ಶಿಲ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ., ಇರುವೈಲಿನ ಪಿಡಿಒ ಕಾಂತಪ್ಪ, ನೆಲ್ಲಿಕಾರು ಪಿಡಿಓ ಪ್ರಶಾಂತ್, ಪಾಲಡ್ಕ ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.