ಸತತ 20 ಗಂಟೆಗಳ ಕಾರ್ಯಾಚರಣೆ : ಕೊನೆಗೂ ಚಿರತೆಯು ಬೋನಿಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ನಿಡೋಡಿ ಚರ್ಚಿನ ಬಲಭಾಗದಲ್ಲಿರುವಂತ ದಡ್ಡಿನ ಫ್ಲೋರಿಂಗ್ ಇವರ ಮನೆಯ ಬಾವಿಗೆ ಶುಕ್ರವಾರ ರಾತ್ರಿ ಎಂದು ಚಿರತೆಯೂ ಬಿದ್ದಿರುವ ಘಟನೆಯು ನಡೆದಿದೆ.

ಶನಿವಾರ ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ಚಿರತೆಯು ಬಾವಿಯಲ್ಲಿ ಮನೆಯವರಿಗೆ ಬೆಳಕಿಗೆ ಬಂದಿದ್ದು ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು ಕೂಡಲೆ ಅರಣ್ಯ ಇಲಾಖೆಯವರು ಇದಕ್ಕೆ ಸ್ಪಂದಿಸಿ ಎರಡು ಗಂಟೆಯ ಹೊತ್ತಿಗೆ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಪರಿಶೀಲಿಸಿ‌ ಬೋನಿಯನ್ನ ತಂದು ಅದಕ್ಕೆ ಕೋಳಿಯನ್ನು ಕಟ್ಟಿ ಬಾವಿಗೆ ಇಳಿಸಲಾಯಿತು ಹಲವು ಪ್ರಯತ್ನ ಮಾಡಿದ ನಂತರವೂ ಚಿರತೆಯು ಬೋನಿಗೆ ಬರಲಿಲ್ಲ ಸತತ 20 ಗಂಟೆಯ ಕಾರ್ಯಾಚರಣೆಯಲ್ಲಿ ಮಂಗಳೂರು ವೆಟರ್ನರಿ ಡಾಕ್ಟರ್ಗಳಾದ ಡಾ. ಯಶ್ವಿನ್ ಡಾ. ಪೃಥ್ವಿ, ಡಾ. ನಫೀಸ ಮತ್ತು ಡಾ. ಮೇಘನ ಅವರ ತಂಡದ ಡಾ. ಮೇಘನ ಅವರು ಬೋನಿನ ಒಳಗೆ ಕೂತು ಬಾವಿಯ ಒಳಗೆ ಬೋನನ್ನು ಇಳಿಸಿ ಅಲ್ಲಿಂದಲೇ ಇಂಜೆಕ್ಷನ್ ಹೊಡೆದು ಮತಿತಪ್ಪಿಸಿ ಚಿರತೆಯನ್ನು ಬೋನಿಗೆ ತರಲಾಯಿತು.

ವಲಯದ ಅರಣ್ಯ ಅಧಿಕಾರಿ ಹೇಮಗಿರಿ ಅಂಗಡಿ, ಡಿ ವೈ ಆರ್ ಎಫ್ ಓ ಮಂಜುನಾಥ್ ಗಂಗಯ್ಯ, ಬೀಟ್ ಫಾರೆಸ್ಟರ್ ಮಂಜುನಾಥ್ ಎಸ್ ಡಿ, ರಾಜು ಎಲ್‌ಜೆ, ಶಿವಕುಮಾರ್, ಸಂದೀಪ್, ಸಂತೋಷ್, ಶಂಕರ್, ಶಿವಾನಂದ್ ಬಂಗಳ್ಳಿ ಇವರ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ನಡೆಯಿತು

ಸ್ಥಳೀಯರಾದ ಸ್ಟ್ಯಾನಿ ಪಿಂಟು, ಸಂದೀಪ್, ಅನಿಷಾ ಡಾಫ್ ನಿ , ಡಿನಿಸ್ ಡಿಸೋಜಾ, ಕ್ಯಾಶ್ವಿನ್ ,ಜಾನ್ಸನ್, ವಾಲ್ಟರ್, ರಿಚರ್ಡ್, ಅಶ್ವಿನಿ, ರಾಯ್ಸನ್, ದೀಪಕ್, ರಫೀಕ್, ಜೀವನ್ , ಗಿರು ಮತ್ತಿತರರ ಸಹಾಯದಿಂದ ಕಾರ್ಯಾಚರಣೆಯು ನಡೆಯಿತು.

Related Posts

Leave a Reply

Your email address will not be published.