ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ

ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ ಎಂದು ಯಾಗಾಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾಗದ ಕಾರ್ಯಾಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಕೊಡೆತ್ತೂರು ಮಾತನಾಡಿ ವೇ.ಮೂ.ಸುಧೀರ್‌ ಭಟ್‌. ನೇತೃತ್ವದಲ್ಲಿ ವೇ.ಮೂ. ಕಾಶಿನಾಥ ಆಚಾರ್ಯ ಮಾರ್ಗದರ್ಶನದಲ್ಲಿ 50 ಮಂದಿ ಖುತ್ವಿಜರಿಂದ ಬೃಹತ್‌ ಕುಂಡದಲ್ಲಿ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ. ದಿನಂಪ್ರತಿ 5000ದಷ್ಟು ಮಂದಿ ಅನ್ನ ಪ್ರಸಾದ ಸ್ವೀಕರಿಸಲಿದ್ದು ಫೆ. 11ರಂದು ಪೂರ್ಣಾಹುತಿಯ ದಿನ ಹತ್ತು ಸಾವಿರದಷ್ಟು ಮಂದಿ ಯಾಗದಲ್ಲಿ ಭಾಗವಹಿಸಲಿದ್ದಾರೆ. ಯಾಗದ ಬಗ್ಗೆ ಭಕ್ತರಿಗೆ ತಿಳಿಸಲು ಈಗಾಗಲೇ ರಥಯಾತ್ರೆಯನ್ನು ಎರಡು ಜಿಲ್ಲೆಗಳಲ್ಲಿ ಪ್ರಚಾರಾರ್ಥ ನಡೆಸಲಾಗಿದ್ದು ಯಾಗ ಮಂಟಪ, ಪಾರ್ಕಿಂಗ್‌ ಇತ್ಯಾದಿ ಸಿದ್ಧತೆಗಳನ್ನು ಪೂರ್ತಿಗೊಳಿಸಲಾಗಿದೆ ಎಂದರು.

ಯಾಗ ಸಂಪೂರ್ಣ ಫಲಪ್ರದ ವಾಗಲು ಭಕ್ತರ ಸಹಕಾರ ಮುಖ್ಯವಾಗಿದೆ. ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಫೆಬ್ರವರಿ 4ರಂದು ಸಂಜೆ 4:00ಗೆ ಋತ್ವಿಜರ ಆಗಮನ ಯಾಗಲಿದೆ ಮತ್ತು ಸಂಜೆ 6:35ಕ್ಕೆ ಉಗ್ರಹಣ ಮೂರ್ತ ಇಡಲಾಗಿದೆ. ಪ್ರತಿದಿನವೂ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8:30 ಗಂಟೆ ತನಕ ವಿವಿಧ ಪೂಜೆಗಳು ಹೋಮ ಅನ್ನಸಂತರ್ಪಣೆ ಫಲಹಾರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 10 ರಂದು ಸಭಾ ಕಾರ್ಯಕ್ರಮವು ಸಂಜೆ 6 ಗಂಟೆಗೆ ನಡೆಯಲಿದ್ದು ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಆಶ್ರಮ ಕೊಂಡೆವೂರು ಉಪ್ಪಳ ಅವರು ಆಶೀರ್ವಚನ ನೀಡಲಿದ್ದಾರೆ ಶ್ರೀ ನಳಿನ್ ಕುಮಾರ್ ಕಟೀಲ್ ಮಾನ್ಯ ಸಂಸದರು ರಾಜ್ಯದಕ್ಷರು ಬಿಜೆಪಿ ಕರ್ನಾಟಕ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ ಸಭಾಧ್ಯಕ್ಷರಾಗಿ ಶ್ರೀ ಉಮನಾಥ್ ಕೋಟಿಯನ್ ಶಾಸಕರು ಮುಲ್ಕಿ ಮೂಡುಬಿದ್ರಿ ಕ್ಷೇತ್ರ ಮತ್ತು ಹಲವು ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ ಫೆಬ್ರುವರಿ 6 ರಿಂದ 10ರ ತನಕ ಸಂಜೆ 2 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರಸ ಮಂಜೂರಿ ಗಿಟಾರ್ ವಾದನ ಯಕ್ಷಗಾನ ಭರತನಾಟ್ಯ ನಾಟಕ ಕಾಲ ಮದ್ದಳೆ ಇತ್ಯಾದಿಗಳು ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಪ್ರೇಮ ರಾಜ ಶೆಟ್ಟಿ, ಕೊಡೆತ್ತೂರು, ಧನಂಜಯ ಶೆಟ್ಟಿಗಾರ್‌ ಪಕ್ಷಿಕೆರೆ, ರಾಜೇಶ್‌ ಕುಲಾಲ್‌, ಸಾಯಿನಾಥ ಶೆಟ್ಟಿ ಮುಂಡ್ಕೂರು,ಪ್ರತೀಕ್‌ ಶೆಟ್ಟಿ ಎಕ್ಕಾರ್‌, ದಿನೇಶ್‌ ಆಚಾರ್ಯ ಪ್ರಕಾಶ್‌ ಆಚಾರ್ಯ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.