ಕೊಂಡೆವೂರು ಮಠದಲ್ಲಿ ಸಂಭ್ರಮದ ಶರನ್ನವರಾತ್ರಿ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಈ ವರ್ಷದ ಶರನ್ನವರಾತ್ರಿಯು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.
ವಿಜಯದಶಮಿಯ ಇಂದು ಪ್ರಾತ:ಕಾಲ 5.00ಕ್ಕೆ ಶ್ರೀ ಗಾಯತ್ರೀ ಮಾತೆಗೆ “ಸೀಯಾಳಾಭಿಷೇಕ”ನಡೆಯಿತು. ಬೆಳಗ್ಗಿನ ಪೂಜೆಯ ನಂತರ “ವಿದ್ಯಾರಂಭ”ವನ್ನು ಗಾಯತ್ರೀ ಮಾತೆಯ ಸನ್ನಿಧಿಯಲ್ಲಿ ನಡೆಯಲಿದೆ. ಪೂರ್ವಾಹ್ನ 10.30ರಿಂದ ಕೊಂಡೆವೂರಿನ ಕು.ಗಾಯತ್ರೀ ಮತ್ತು ಬಳಗದವರಿಂದ ಸಂಗೀತ ಸೇವೆ ನಡೆಯಲಿದೆ. “ಶಾರದಾ ವಿಸರ್ಜನೆ”ಯು ಮಧ್ಯಾಹ್ನ 12.30 ಕ್ಕೆ ಭವ್ಯ ಮೆರವಣಿಗೆಯಲ್ಲಿ ಸಾಗಿ ನಕ್ಷತ್ರವನದ ಆನಂದತೀರ್ಥ ಪುಷ್ಕರಿಣಿಯಲ್ಲಿ ನಡೆಯಲಿದೆ.
