ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಜೂ. ಎನ್‌ಟಿಆರ್ ಭೇಟಿ
ಬೈಂದೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಜೂನಿಯರ್ ಎನ್‌ಟಿಆರ್ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಅವರಿಗೆ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಥ್ ನೀಡಿದರು.
ನಟ ತಾರಕ್ ರಾಮ್, ರಿಷಬ್, ನೀಲ್ ಕುಟುಂಬದಿಂದ ತಾಯಿ ಮೂಕಾಂಬಿಕೆಯ ದರ್ಶನ ಪಡೆದರು. ತಾಯಿ ಶಾಲಿನಿ ನಂದಮೂರಿ, ಪತ್ನಿ ಲಕ್ಷ್ಮೀ ಪ್ರಣತಿ, ಪ್ರಗತಿ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಲಿಖಿತಾ ನೀಲ್ ಅವರಿಗೆ ಕೊಲ್ಲೂರು ಆಡಳಿತ ವತಿಯಿಂದ ಗೌರವಿಸಿದರು.
ಇದೇ ವೇಳೆ ಮಾತನಾಡಿದ ಜ್ಯೂನಿಯರ್ ಎನ್‌ಟಿಆರ್ ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯಿತು. ಮೂಕಾಂಬಿಕೆಯ ದರ್ಶನ ಮಾಡಿಸಿದ್ದ ರಿಷಬ್ ಅವರಿಗೆ ತುಂಬಾ ಧನ್ಯವಾದಗಳು ಎಂದರು.