ಕೊಂಕಣಿ ಮತ್ತು ಬ್ಯಾರಿ ಅಕಾಡಮಿಗಳ ಸಂಯೋಜಿತ ಐಕ್ಯತಾ ಕಾರ್ಯಕ್ರಮ.
ಕರ್ನಾಟಕ ಕೊಂಕಣಿ ಹಾಗೂ ಬ್ಯಾರಿ ಅಕಾಡಮಿ ಗಳು ಜಂಟಿಯಾಗಿ ನಾಳೆ ನವೆಂಬರ್ 23 ಬುಧವಾರ ಕೊಂಕಣಿ ಅಕಾಡೆಮಿಯ ಸಭಾಂಗಣ ಲಾಲ್ ಬಾಗ್ ಮಹಾನಗರ ಪಾಲಿಕೆಯ ಕಛೇರಿಯ ಹಿಂದಿನಲ್ಲಿ ಸಂಜೆ ನಾಲ್ಕು ಗಂಟೆಗೆ ವಿವಿಧ ಭಾಷೆಗಳ ಹಾಗೂ ಸಂಸ್ಕೃತಿಯ ಏಕತೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಿಜಿಸ್ಟ್ರಾರ್ ಮನೋಹರ್ ಕಾಮತ್ ತಿಳಿಸಿದ್ದಾರೆ.ಕೊಂಕಣಿ, ಬ್ಯಾರಿ, ತುಳು,ಕನ್ನಡ, ಹವ್ಯಕ ಭಾಷೆಗಳ ನಾಮಾಂಕಿತ ಕವಿಗಳು ತಮ್ಮ ಐಕ್ಯತಾ ಪ್ರೋತ್ಸಾಹ ಕವಿತೆಗಳು ಸಾಧರ ಪಡಿಸುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಕ ಜಿಲ್ಲೆಯ ಅಧಿಕಾರಿ ರಾಜೇಶ್ ಹಾಜರಿರುವರು.ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸಂಯೋಜನೆ ಯಲ್ಲಿ ಸಹಕಾರ ನೀಡಿದ್ದಾರೆಆಸಕ್ತರು ಭಾಗವಹಿಸಲು ಈ ಮೂಲಕ ಕೋರಲಾಗಿದೆ.