‘ಸತ್ಯ ಒಪ್ಪಿಕೊಂಡ ಸಚಿವ ಚೆಲುವರಾಯಸ್ವಾಮಿಗೆ ನನ್ನ ಅಭಿನಂದನೆ’ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಕಾಂಗ್ರೆಸ್ ನ ಉಚಿತ 5 ಗ್ಯಾರಂಟಿಗಳು ಕೇವಲ ಚುನಾವಣೆ ಗೆಲ್ಲಲು ರೂಪಿಸಿರುವ ತಂತ್ರ ಎಂದು ಬಿಜೆಪಿ ಮೊದಲಿನಿಂದಲೂ ಟೀಕಿಸುತ್ತಾ ಬಂದಿತ್ತು. ಇದೀಗ ಬಿಜೆಪಿ ಟೀಕೆಗಳು ಅಕ್ಷರಶಃ ಸತ್ಯವೆಂಬಂತೆ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರ ಹೇಳಿಕೆಯೇ ಸಾಕ್ಷಿ ಎಂಬಾಂತಾಗಿದೆ. ಸಚಿವ ಎನ್ ಚೆಲುವರಾಯಸ್ವಾಮಿ ಮಾಧ್ಯಮದ ಮುಂದೆ ಕಾಂಗ್ರೆಸ್ ನ ಉಚಿತ ಗ್ಯಾರಂಟಿಗಳ ಬಗ್ಗೆ ಮಾತನಾಡುವಾಗ, ಚುನಾವಣೆಯಲ್ಲಿ ಗೆಲ್ಲಬೇಕು ಎಂದಾಗ ಈ ರೀತಿಯ ಚೀಪ್ ಪಾಪ್ಯುಲಾರಿಟಿ ಮಾಡಬೇಕಾಗುತ್ತೆ ಎಂದು ಹೇಳಿ ಕಾಂಗ್ರೆಸ್ ತಲೆ ತಗ್ಗಿಸುವಂತೆ ಮಾಡಿದೆ. ಇದೇ ಹೇಳಿಕೆ ಬಿಜೆಪಿ ಗೆ ಹೊಸ ಅಸ್ತ್ರ ದೊರೆತಂತಾಗಿದೆ.

ಈ ಹೇಳಿಕೆಯ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಚೆಲುವರಾಯಸ್ವಾಮಿ ಗ್ಯಾರೆಂಟಿಗಳು ಗಿಮಿಕ್ ಎಂದಿದ್ದಾರೆ. ಇರುವ ಸತ್ಯವನ್ನು ಕಾಂಗ್ರೆಸ್ಸಿಗರು ಒಪ್ಪಿಕೊಂಡಿದ್ದಾರೆ. ಬಹುತೇಕ ಎಲ್ಲಾ ಕಾಂಗ್ರೆಸ್ಸಿಗರಿಗೆ ಗ್ಯಾರೆಂಟಿ ಅಸಾಧ್ಯ ಎಂದು ಗೊತ್ತಿರಬಹುದು, ಆರ್ಥಿಕವಾಗಿ ಬಹುದೊಡ್ಡ ಕುಸಿತ ಮತ್ತು ಹೊಡೆತ ಎಂದು ತಿಳಿದಿರಬಹುದು, ಮತಕ್ಕಾಗಿ, ಗೆಲ್ಲಲು ಹೀಗೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೂ ಅರ್ಥವಾಗಿರಬಹುದು. ಆದರೆ ಚುನಾವಣೆಗಾಗಿ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಾರ್ವತ್ರಿಕವಾಗಿ ರಾಜ್ಯಕ್ಕೆ ಗೊತ್ತಾಗಿದೆ. ಆದ್ದರಿಂದ ಸತ್ಯ ಒಪ್ಪಿಕೊಂಡ ಚೆಲುವರಾಯಸ್ವಾಮಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Related Posts

Leave a Reply

Your email address will not be published.