ಫೆ.19ರಂದು ಕೋಟಿ ಚೆನ್ನಯ ಟ್ರೋಫಿ – 2023

ಮಂಗಳೂರಿನ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ರಿಜಿಸ್ಟರ್ ಇದರ ಆಶ್ರಯದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಇವರ ಸಾರಥ್ಯದಲ್ಲಿ ಫೆ.19ರಂದು ಕೋಟಿ ಚೆನ್ನಯ ಟ್ರೋಫಿ – 2023ರ ನಡೆಯಲಿದ್ದು, ಈ ಪ್ರಯುಕ್ತ ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಆಮಂತ್ರಣ ಪ್ರತಿಕೆಯ ಬಿಡುಗಡೆ ಸಮಾರಂಭ ಜರುಗಿತ್ತು.

ತಾಂತ್ರಿಕತೆ, ವೈಜ್ಞಾನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳನ್ನೇ ಮರೆಯುತ್ತಿದ್ದಾರೆ.ಇದಕ್ಕಾಗಿಯೇ ಯುವಕರನ್ನು ಹಾಗೂ ಮಹಿಳೆಯರನ್ನ ಗ್ರಾಮೀಣ ಕ್ರೀಡೆಗಳತ್ತ ಆಕರ್ಷಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಕೋಟಿ ಚೆನ್ನಯ ಟ್ರೋಫಿ-2023ರ ಹಗ್ಗ ಜಗ್ಗಾಟ ನಡೆಯಲಿದೆ.ಫೆ. 19ರ ಆದಿತ್ಯವಾರ ಸಂಜೆ 5ಗಂಟೆಗೆ ನಗರದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಪುರುಷರ ಹಾಗೂ ಮಹಿಳೆಯರ ಹಗ್ಗ – ಜಗ್ಗಾಟ ನಡೆಯಲಿದೆ. ಇದಕ್ಕಾಗಿಯೇ ಅದ್ಧೂರಿ ತಯಾರಿ ಕೂಡ ನಡೆಯುತ್ತಿದೆ. ಮಂಗಳೂರಿನ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ರಿಜಿಸ್ಟರ್ ಇದರ ಆಶ್ರಯದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಇವರ ಸಾರಥ್ಯದಲ್ಲಿ ನಡೆಯಲಿರುವ ಕೋಟಿ ಚೆನ್ನಯ ಟ್ರೋಫಿಯ ಆಮಂತ್ರಣ ಪ್ರತಿಕೆಯ ಬಿಡುಗಡೆ ಸಮಾರಂಭವು ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಜರುಗಿತ್ತು.ಶ್ರೀ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಅವರು ಬಿಡುಗಡೆಗೊಳಿಸಿದ್ರು.ಈ ವೇಳೆ ಅವರು ಕ್ರೀಡಾಕೂಟಕ್ಕೆ ಶುಭಾ ಹಾರೈಸಿದರು.

ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ಪುರುಷರ ಹಾಗೂ ಮಹಿಳೆಯರ ಲೆವೆಲ್ ಮಾದರಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಯ ಮುಕ್ತ ಹಗ್ಗ ಜಗ್ಗಾಟ ನಡೆಯಲಿದ್ದು, ಜೊತೆಗೆ ಆಶಕ್ತರಿಗೆ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಅವರು ಉದ್ಘಾಟಿಸಲಿದ್ದು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್, ಪೆÇಲೀಸ್ ಕಮೀಷನರ್ ಎನ್.ಶಶಿಕುಮಾರ್ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಈ ವೇಳೆ ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ, ಎಸ್.ಎನ್ ಡಿ ಕೋಡಿಕಲ್ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿ, ಆಶೋಕನಗರದ ಚಂಡ ಚಂಡೇಶ್ವರಿ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಉದಯ್ ರಂಜನ್, ದಕ್ಷಿಣ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರಾದ ಪ್ರಕಾಶ್ ಗರೋಡಿ, ಶ್ರೀಕ್ಷೇತ್ರದ ಪ್ರಧಾನ ಅರ್ಚಕರು, ಹಾಗೂ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.