ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕೌಡಿಕಳಿ ಆಯ್ಕೆ : ತೆಲಿಕೆದ ತೆನಾಲಿ ತಂಡದ ಸುನಿಲ್ ನೆಲ್ಲಿಗುಡ್ಡೆ ಪ್ರಧಾನ ನಟನೆಯ ಸಿನಿಮಾ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ತೆಲಿಕೆದ ತೆನಾಲಿ ಬಿರುದಾಂಕಿತ ಸುನಿಲ್ ನೆಲ್ಲಿಗುಡ್ಡೆ ಇವರ ಪ್ರಧಾನ ನಟನೆಯ ಕೊಡವ ಭಾಷೆಯ ಕೌಡಿಕಳಿ ಚಲನಚಿತ್ರ ಬೆಂಗಳೂರಿನಲ್ಲಿ ನಡೆಯಲಿರುವ 2023ನೇ ಸಾಲಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಭಾರತ ಚಲನಚಿತ್ರ ವಿಭಾಗದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಕೊಡವ ಸಿನಿಮಾ ಎಂಬ ಹೆಗ್ಗೆಳಿಕೆಗೂ ಪಾತ್ರವಾಗಿದೆ. ಕೌಡಿಕಳಿ ಸಿಂಚನ ಪೊನ್ನಪ್ಪ ನಿರ್ದೇಶನದ ಸಿನಿಮಾವಾಗಿದ್ದು, ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಕೌಡಿಕಳಿ ಸಿನಿಮಾ ಓಂ ಸ್ಟುಡಿಯೋ ಮತ್ತು ಪಿಂಗಾರ ಕ್ರಿಯೇಷನ್ಸ್‍ನಲ್ಲಿ ಮೂಡಿಬಂದಿದೆ. ಆರ್. ಪ್ರೀತಮ್ ಶೆಟ್ಟಿ ಕಥೆ, ಸಿಂಚನ ಪೊನ್ನಪ್ಪ ನಿರ್ದೇಶನ, ಅವಿನಾಶ ಶೆಟ್ಟಿ, ವನಿತಾ ಚಂದ್ರಮೋಹನ್ ನಿರ್ಮಾಪಕರಾಗಿದ್ದು, ಇನ್ನುಳಿದಂತೆ ಸಂದೀಪ್ ನೀನಾಸಂ, ನಿವೇದಿತಾ ರೆಬೆಲ್ಲೊ ರಿಶೀತ್ ಸುನಿಲ್, ಭೈರವ ಸಿನಿಮಾದಲ್ಲಿ ನಟಿಸಿದ್ದಾರೆ

2020ರಲ್ಲಿ ಪ್ರೀತಮ್ ಶೆಟ್ಟಿ ನಿರ್ದೇಶನದ ಅವಿನಾಶ ಶೆಟ್ಟಿ ನಿರ್ಮಾಣದ ಪಿಂಗಾರ ಚಲನಚಿತ್ರ ಬೆಂಗಳೂರಿನಲ್ಲಿ ನಡೆದಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಏಷ್ಯಾದ ಉತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದಿದೆ. ತೆಲಿಕೆದ ತೆನಾಲಿ ತಂಡವು ವಿ4 ನ್ಯೂಸ್‍ನ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಪ್ರೀಮಿಯರ್ ಲೀಗ್‍ನ ಪ್ರಮುಖ ತಂಡವಾಗಿದ್ದು, ಸಿಪಿಎಲ್ ಸೀಸನ್- 2ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲದೆ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಫರ್ಫಾಮೆನ್ಸ್‍ನ್ನು ನೀಡಿ ಎಲ್ಲರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸುನಿಲ್ ನೆಲ್ಲಿಗುಡ್ಡೆ, ರಮಾನಂದ ನಾಯಕ್ ಜೋಡುರಸ್ತೆ ವಸಂತ್ ಮುನಿಯಾಲ್, ಸುಜೀತ್ ಕೋಟ್ಯಾನ್ ಮತ್ತು ವಿಶಾಖ್ ದೇವಾಡಿಗ ಜೋಡುರಸ್ತೆ ತೆಲಿಕೆದ ತೆನಾಲಿ ತಂಡದಲ್ಲಿ ಪ್ರಮುಖ ಕಲಾವಿದರಾಗಿದ್ದು, ಈ ತಂಡದಲ್ಲಿ ಸುನಿಲ್ ನೆಲ್ಲಿಗುಡ್ಡೆ, ರಮಾನಂದ ನಾಯಕ್ ಜೋಡುರಸ್ತೆ ವಸಂತ್ ಮುನಿಯಾಲ್, ಸುಜೀತ್ ಕೋಟ್ಯಾನ್ ಈ ನಾಲ್ವರು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿರುವುದು ಈ ತಂಡದ ಮತ್ತೊಂದು ವಿಶೇಷತೆ. ಇದೀಗ ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುನಿಲ್ ನೆಲ್ಲಿಗುಡ್ಡೆ ಪ್ರಧಾನ ನಟನೆಯ ಕೌಡಿಕಳಿ ಕೊಡವ ಭಾಷೆಯ ಚಲನಚಿತ್ರ ಆಯ್ಕೆಯಾಗಿದ್ದು, ಕರಾವಳಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಚಾರ.
