ಕೊಯಿಲ ಫಾರ್ಮ್‍ನ ಹುಲ್ಲುಗಾವಲಿಗೆ ಆಕಸ್ಮಿಕ ಬೆಂಕಿ

ಕಡಬ ತಾಲೂಕಿನ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಒಣಹುಲ್ಲುಗಳಿಂದ ಆವೃತ್ತವಾದ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಸುಮಾರು 15 ಎಕರೆಯಷ್ಟು ಆವರಿಸಿದ್ದು, ಇದರಿಂದ ಸೃಷ್ಠಿಯಾದ ದಟ್ಟ ಹಿಗೆ ಮುಗಿಲೆತ್ತರಕ್ಕೆ ಚಾಚಿದ್ದು ಭಯಾನಕವಾಗಿತ್ತು. ಹುಲ್ಲುಗಾವಲಿನ ಸುಮಾರು ಹದಿನೈದು ಎಕರೆ ಪ್ರದೇಶಕ್ಕೆ ಬೆಂಕಿ ಆವರಿಸಿ ಸುಟ್ಟು ಕರಕಲಾಗಿದೆ.

ಇದರಿಂದಾಗಿ ಅಪಾರ ನಷ್ಟ ಉಂಟಾಗಿದೆ. ಫಾರ್ಮನ ಆನೆಗುಂಡಿ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ನಿಯಂತ್ರಣಕ್ಕೆ ಬಾರದೆ ಫಾರ್ಮನ ದ್ವಾರದ ತನಕ ಧಾವಿಸಿ ಅಪಾರ ಪ್ರಮಾಣದ ಒಣ ಹುಲ್ಲನ್ನು ಆಹುತಿ ಪಡೆದುಕೊಂಡಿದೆ. ಕೊಯಿಲ ಪಶು ಸಂಗೋಪನಾ ಕೇಂದ್ರದ ಉಪ ನಿರ್ದೆಶಕ ಡಾ|ವೆಂಕಟೇಶ್, ಸಹಾಯಕ ನಿರ್ದೆಶಕ ಡಾ|ಧರ್ಮಪಾಲ ಗೌಡ ಅವರ ನೇತೃತ್ವದಲ್ಲಿ ಸುಮಾರು 25 ಕ್ಕೂ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗದ್ದಾರೆ.
