ಪಾನಮತ್ತ ಪ್ರಯಾಣಿಕನನ್ನು ಬಸ್ಸಿನಿಂದ ಹೊರದೂಡಿದ ಕಂಡಕ್ಟರ್
ದಕ್ಷಿಣಕನ್ನಡಈಶ್ವರ ಮಂಗಲ:ಸರಕಾರಿ ಬಸ್ ನಿರ್ವಾಹಕ ನಿಂದ ಅಮಾನುಷ ಹಲ್ಲೆ, ಕ್ರಮಕ್ಕೆ ಆಗ್ರಹ
ಈಶ್ವರಮಂಗಲ :ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯ ಪದವು ಕಡೆಗೆ ಸಂಜೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನ ಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ದೂಡಿ ಹಾಕಿದ ಘಟನೆ ಇಂದು ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ. ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಪದಡ್ಕ ಹೋಗಲು ಬಸ್ಸನ್ನು ಹತ್ತಿದ್ದು, ಮದ್ಯಪಾನ ಮಾಡಿರುವುದನ್ನು ಗಮನಿಸಿದ ನಿರ್ವಾಹಕ ಕೃಷ್ಣಪ್ಪ ರವರನ್ನು ಕೈಯಿಂದ ದೂಡಿ ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ ಕೃಷ್ಣಪ್ಪ ಕೆಳಗೆ ರಸ್ತೆಗೆ ಬಿದ್ದಿದ್ದಾರೆ.
ಬಿದ್ದಿರುವ ಕೃಷ್ಣಪ್ಪರನ್ನು ನಿರ್ವಾಹಕ ಹಾಗೆ ಬಿಟ್ಟು ತೆರಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ವಿಷಯ ತಿಳಿದ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಸರಕಾರಿ ಬಸ್ ನ ಪುತ್ತೂರು ಘಟಕವನ್ನು ಸಂಪರ್ಕಿಸಿ ಬಸ್ಸು ನಿರ್ವಾಹಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಕೃತ್ಯಕ್ಕೆ ಕಾರಣರಾದ ಬಸ್ ನಿರ್ವಾಹಕನನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.