ಮಂಗಳೂರು; KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್

ಮಂಗಳೂರು ನಗರದ ಬಿಜೈಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ವೊಂದು ಆತಂಕ ಸೃಷ್ಟಿಸಿದ ಪ್ರಸಂಗ ಇಂದು ನಡೆದಿದೆ.

ಬಸ್ ನಿಲ್ದಾಣದ ಅನುಮಾನಾಸ್ಪದ ಬ್ಯಾಗ್ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ಯಾಡ್ , ಶ್ವಾನದಳ ಅದನ್ನು ಪರಿಶೀಲನೆ ನಡೆಸಿತು. ಈ ನಡುವೆ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಅದು ಬಸ್ ಪ್ರಯಾಣಿಕನೊಬ್ಬನಿಗೆ ಸೇರಿದ್ದೆಂದು ತಿಳಿದುಬಂತು. ಇದರೊಂದಿಗೆ ಬಸ್ ನಿಲ್ದಾಣದಲ್ಲಿದ್ದವರು ನಿರಾಳರಾದರು.

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಸದ್ಯ ಸಾಕಷ್ಟು ಆತಂಕವಿರುವ ನಡುವೆಯೇ ಅನುಮಾನಾಸ್ಪದವಾಗಿದ್ದ ಬ್ಯಾಗ್ ಕಂಡು ಜನರು ಆತಂಕಗೊಂಡಿದ್ದರು. ಆದರೆ ಬ್ಯಾಗ್ ನ ವಾರಸುದಾರ ಬಂದಾಗ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Related Posts

Leave a Reply

Your email address will not be published.