ಮೃತ ಕಾರು ಚಾಲಕನ ಕುಟುಂಬದ ಆರ್ಥಿಕ ಸ್ಥಿತಿಗೆ ಸ್ಪಂದಿಸಿದ ಕಾರು ಚಾಲಕರು

ಬಡ ಕುಟುಂಬದ ಕಾರು ಚಾಲಕನೊರ್ವ ಹೃದಯಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಸಂದರ್ಭ ಕುಟುಂಬದ ನೋವಿಗೆ ಸ್ಪಂದಿಸಿದ ರಾಜ್ಯಾದ್ಯಂತ ಇರುವ ಕಾರು ಚಾಲಕರು ವಾಟ್ಸಾಪ್ ಗ್ರೂಪ್ ನಲ್ಲಿ ಪ್ರತಿಕ್ರಿಯಿಸಿ ಅದರನ್ನು ಶೇಕರಣೆಗೊಂಡ ಹಣದ ಮೊತ್ತವನ್ನು ಆ ಬಡ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.

ಪಡುಬಿದ್ರಿ ಕಾರು ಚಾಲಕ ಸುರೇಶ್ (45) ಇವರು ಕೆಲ ದಿನಗಳ ಹಿಂದೆ ಮೃತರಾಗಿದ್ದರು, ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಸಂಘಟನೆ ತಮ್ಮ ವೃತ್ತಿ ಬಾಂಧವನ ಕುಟುಂಬಕ್ಕೆ ಸ್ಪಂಧಿಸಿ ತಮ್ಮ ಕೈಯಲಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭ ಕರುಣಾ ಟ್ಯಾಕ್ಸಿ ಅಸೋಸಿಯನ್ ಪದಾಧಿಕಾರಿಗಳಾದ ಸಂಸ್ಥಾಪಕರು ನಾಗರಾಜ್ ಬೆಂಗಳೂರು,ಅಧ್ಯಕ್ಷರು ಮಂಜುನಾಥ್ ಕೆರೆಮನೆ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಭಕ್ತ ಮಣಿಪಾಲ್, ಖಜಾಂಚಿ ಯವರಾದ ಅಹಮದ್ ಬಾವ ಮಂಜೇಶ್ವರ, ಹಾಗೂ ಪದಾಧಿಕಾರಿಗಳಾದ ಇಲಿಯಾಸ್ ಪಡುಬಿದ್ರಿ, ಹೆಚ್.ಕೆ ಅಹಮದ್ ಬಾವ ,ಪ್ರಕಾಶ್ ಶೆಟ್ಟಿ ಹೆಜಮಾಡಿ, ಅಶ್ರಫ್ ಸುರತ್ಕಲ್ ಮುಂತಾದವರಿದ್ದರು.