ಸಮಾಜದಲ್ಲಿ ಭೀತಿ ಮೂಡಿಸುವ ಚಟುವಟಿಕೆ ಮಟ್ಟ ಹಾಕುತ್ತೇವೆ -ಸಚಿವ ಸುನೀಲ್ ಕುಮಾರ್
ಸಮಾಜದಲ್ಲಿ ಭೀತಿ ಮೂಡಿಸುವ ಎಲ್ಲಾ ಚಟುವಟಿಕೆಗಳನ್ನು ಮಟ್ಟ ಹಾಕುತ್ತೇವೆ. ಆಗಿರುವ ಘಟನೆಗಳ ನೋಡಿದರೆ ಅವರ ಉದ್ದೇಶ ಸ್ಪಷ್ಟವಾಗಿದೆ ಎಂದು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಇಂದು ಕುಕ್ಕರ್ ಬಾಂಬ್ ಸ್ಪೋಟಗೊಂಡ ನಾಗುರಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಹಿಂದು ಸಮಾಜವನ್ನು ಗುರಿಯಾಗಿಸಲಾಗಿದೆ. ಅವರ ಷಡ್ಯಂತ್ರವನ್ನು ಮಟ್ಟ ಹಾಕುತ್ತೇವೆ. ಎನ್‍ಐಎಗೆ ಶೀಘ್ರವಾಗಿ ಪ್ರಕರಣ ಹಸ್ತಾಂತರ ಆಗಲಿದ್ದು, ಇಡೀ ಪ್ರಕರಣದ ಆಳ ಅಗಲ ತಿಳಿಯಲಿದೆ ಎಂದು ತಿಳಿಸಿದರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಟೊ ಚಾಲಕ ಪುರುಷೋತ್ತಮ ಪೂಜಾರಿಯವರ ಆರೋಗ್ಯವನ್ನು ಸಚಿವರು ಆಸ್ಪತ್ರೆಗೆ ಭೇಟಿಯಾಗಿ ವಿಚಾರಿಸಿದರು. ಹಾಗೂ ಕುಟುಂಬದವರಿಗೆ ಧೈರ್ಯ ತುಂಬಲಾಯಿತು..