ಕುಲಶೇಖರ: ಶ್ರೀ ವೀರನಾರಾಯಣ ದೇವಸ್ಥಾನ ,
ಆಡಳಿತ ಮೊತ್ತೇಸರರಾಗಿ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆ

ಮಂಗಳೂರು : ಇತಿಹಾಸ ಪ್ರಸಿದ್ಧ ಇತ್ತೀಚಿಗಷ್ಟೇ ವೈಭವದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಂಡ ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ಕ್ಷೇತ್ರದ ಆಡಳಿತ ಮೊತ್ತೇಸರರಾಗಿ ಕೆ ಸುಂದರ್ ಕುಲಾಲ್ ಶಕ್ತಿನಗರ ಆಯ್ಕೆಗೊಂಡಿದ್ದಾರೆ,
ಪ್ರಧಾನ ಕಾರ್ಯದರ್ಶಿಯಾಗಿ ಗಿರಿಧರ್ ಜೆ ಮೂಲ್ಯ, ಕೋಶಾಧಿಕಾರಿಯಾಗಿ ದಯಾನಂದ್ ಪಿ ಎಸ್ ಕುತ್ತಾರ್ ಮತ್ತು ಮೊತ್ತೇಸರರಾಗಿ ಮೋಹನ್‌ದಾಸ್ ಅಳಪೆ, ರಾಜೇಶ್ ಕುಲಾಲ್ ಶಕ್ತಿನಗರ, ಸದಾನಂದ ಬಂಗೇರ ಕೆ ಮುಡಿಪು, ಆನಂದ ಪಿ ಉರ್ವ, ವಾಸುದೇವ ಮೂಲ್ಯ ಉಳಾಯಿಬೆಟ್ಟು ಮತ್ತು ರಮೇಶ್ ಎಮ್ ಬಾಳ ರವರು ಇತ್ತೀಚಿಗೆ ನಡೆದ ದಕ್ಷಿಣ ಕನ್ನಡ ಮೂಲ್ಯಾರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು,