ಕುಲಶೇಖರ ಬ್ರಹ್ಮಕಲಶೋತ್ಸ ವ ವೈಭವ : ಪ್ರಧಾನ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆ

ಕುಲಾಲರ ಕುಲದೇವರು ಕುಲಶೇಖರ ಕ್ಷೇತ್ರದ ಪ್ರಧಾನ ಶ್ರೀ ವೀರನಾರಾಯಣ ದೇವರ ಪ್ರತಿಷ್ಠೆಯು ಇಂದು ಬೆಳಿಗ್ಗೆ ೯.೧೦ರ ಮಿಥುನಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ವೈದಿಕ ನೇತೃತ್ವದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಭಕ್ತಾಧಿಗಳ ಉಪಸ್ಥಿತಿಯಲ್ಲಿ ನೆರವೇರಿತು.
ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನ. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಂಗಳೂರು ಇದರ ಆಡಳಿತದಲ್ಲಿರುವ ಈ ದೇವಸ್ಥಾನವು ಇದೀಗ ಸರಿಸುಮಾರು ೭೪ ವರ್ಷಗಳ ಬಳಿಕ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನೆರವೇರುತ್ತಿದೆ. ಇದೀಗ ಮಧ್ಯಾಹ್ನ ೧೨.೨೩ಕ್ಕೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಜರಗಲಿದೆ. ದೇವಸ್ಥಾನದ ಸಮಿತಿ ಪದಾಧಿಕಾರಿಗಳಾದ ಮಯೂರ್ ಉಳ್ಳಾಲ್, ಪುರುಷೋತ್ತಮ ಕುಲಾಲ್, ಬಿ. ಪ್ರೇಮಾನಂದ ಕುಲಾಲ್, ಕೆ. ಸುಂದರ ಕುಲಾಲ್, ದಾಮೋದರ ಎ. ಬಂಗೇರ, ಎಂ.ಪಿ. ಬಂಗೇರ ಬಿಜೈ, ಗೀತಾ ಮನೋಜ್, ಗಿರಿಧರ ಜೆ. ಮೂಲ್ಯ, ಬಿ. ಮೋಹನದಾಸ್ ಅಳಪೆ, ರಘು ಎ. ಮೂಲ್ಯ ಮುಂಬೈ, ಸುನಿಲ್ ಆರ್. ಸಾಲ್ಯಾನ್ ಮುಂಬೈ, ದಿವಾಕರ ಮೂಲ್ಯ ಬೆಂಗಳೂರು, ಬಿ. ದಿನೇಶ್ ಕುಲಾಲ್, ಮಾಧವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು