ಪಲ್ಗುಣಿ ತೀರದಲ್ಲಿ ತೇಲಿ ಬಂದ ಟನ್‍ಗಟ್ಟಳೆ ತ್ಯಾಜ್ಯ : ಸಂಘಸಂಸ್ಥೆ, ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯ

ಕೂಳೂರಿನ ನದಿ ತೀರದಲ್ಲಿ ಶೇಖರಣೆಗೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಲ್ಗುಣಿ ನದಿ ತೀರದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್, ನದಿಯಲ್ಲಿ ತೇಲಿ ಬಂದ ಟನ್‍ಗಟ್ಟಲೆ ತ್ಯಾಜ್ಯವನ್ನು ಸಂಘ ಸಂಸ್ಥೆ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯ ನಡೆಸಿದರು. ಎಲ್ಲಾ ತ್ಯಾಜ್ಯಗಳನ್ನು ಸ್ವಯಂ ಸೇವಕರು ಹೆಕ್ಕಿ ಸ್ವಚ್ಛಗೊಳಿಸಿದರು. ಮಂಗಳೂರಿನ ರೇಂಜ್ ಅರಣ್ಯ ಇಲಾಖೆ, ಸಿಒಡಿಪಿ, ಎನ್‍ಇಸಿಎಫ್ ಮೊದಲಾದ ಸಂಘಟನೆಗಳುವರು ಸಹಕಾರ ನೀಡಿದ್ದಾರೆ.