ಕುಂಪಲ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾವು

ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯ ದಂಪತಿಯ ಹಿರಿಯ ಪುತ್ರಿ ಧನ್ಯ(17) ಮೃತ ವಿದ್ಯಾರ್ಥಿನಿ.
ಧನ್ಯ ನಗರದ ಕಾಲೇಜಿನಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿನಿಯಾಗಿದ್ದಳು.ಫೆ.14 ರಂದು ಮದ್ಯಾಹ್ನ ಧನ್ಯ ತಾಯಿ ಭವ್ಯ ಮನೆಗೆ ತೆರಳಿದಾಗ ರಜೆಯಲ್ಲಿದ್ದ ಮಗಳು ಮನೆಯಲ್ಲಿ ಇರಲಿಲ್ಲ.ಮದ್ಯಾಹ್ನ 3 ಗಂಟೆಗೆ ಧನ್ಯ ಮನೆಗೆ ಮರಳಿದ್ದು ಈ ವೇಳೆ ತಾಯಿ ಮಗಳಲ್ಲಿ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದ್ದು ಗೆಳತಿ ಮನೆಗೆ ಓದಲು ತೆರಳಿದ್ದೆ ಎಂದು ಧನ್ಯ ಹೇಳಿದ್ದಾಳೆ.ಗೆಳತಿ ಮನೆಗೆ ಹೋಗುವಾಗ ಫೋನ್ ಕರೆ ಏಕೆ ಮಾಡಿಲ್ಲ ಎಂದು ತಾಯಿ ಗದರಿದ್ದು ಎರಡು ಏಟು ಹೊಡೆದಿದ್ದರಂತೆ.ಬಳಿಕ ತಾಯಿ ಸಮೀಪದ ಮನೆಗೆ ಕೆಲಸಕ್ಕೆ ತೆರಳಿದ್ದರು .ಈ ವೇಳೆ ಧನ್ಯ ಮನೆಯೊಳಗಿದ್ದ ಗೆದ್ದಲು ಹೊಡೆಯುವ ಕೀಟ ನಾಶಕ ಸೇವಿಸಿ ತೀರಾ ಅಸ್ವಸ್ಥಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾಳೆ.
ಮೃತ ಧನ್ಯ ತಂದೆ ಸೋಮನಾಥ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು,ತಾಯಿ ಭವ್ಯ ಉಪ್ಪಿನ ಕಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಸಂಜೆ ಹೊತ್ತಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.ದಂಪತಿಯ ಇನ್ನೋರ್ವ ಕಿರಿಯ ಪುತ್ರ ಭುವನ್ ಹೈಸ್ಕೂಲ್ ಓದುತ್ತಿದ್ದಾನೆ.