ಕುಂದಾಪುರ : ತ್ರಾಸಿ ಅಂಬಾ ಶೋ ರೂಂ ಗೆ ಆಕಸ್ಮಿಕ ಬೆಂಕಿ

ಕುಂದಾಪುರ:ತಾಲೂಕಿನ ತ್ರಾಸಿ ಅಂಬಾ ಶೋ ರೂಂ ಗೆ ತಗುಲಿದ ಆಕಸ್ಮಿಕ ಬೆಂಕಿ ಯಿಂದಾಗಿ ಶೋ ರೂಂ ದಗದಹಿಸಿದೆ.ಕೋಟಿ.ಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.

ಕರಾವಳಿ ಭಾಗದಲ್ಲಿ ಪದೆ ಪದೆ ಅಗ್ನಿ ಅವಘಡಗಳು ಸಂಭವಿಸುತ್ತ ಇದ್ದರು, ಹೆಚ್ಚಿನ ಯಾವುದೇ ರೀತಿಯ ಸೌಲಭ್ಯ ಇಲ್ಲದೆ ಇರುವುದು ಅಗ್ನಿ ಅನಾಹುತದಲ್ಲಿ ನಷ್ಟ ಪ್ರಮಾಣ ಅಧಿಕವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಆಕಸ್ಮಿಕವಾಗಿ ತಗುಲಿದ ಬೆಂಕಿ ಶೊ ರೂಂ ಇಡಿ ವ್ಯಾಪಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟರು.
ಕುಂದಾಪುರ, ಬೈಂದೂರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಸಿಬ್ಬಂದಿಗಳುಸ್ಥಳೀಯರು ಸಹಕರಿಸಿದರು.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
